ಬೆಂಗಳೂರು [ಜು.15] : ರಾಜ್ಯ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದೆ. ಸರ್ಕಾರಕ್ಕೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಸಚಿವರೋರ್ವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ಎಲ್ಲೆಡೆ ಹರಡಿದೆ. 

ಜಿ.ಟಿ.ದೇವೇಗೌಡ ಕಮಲ ಪಾಳಯದತ್ತ ಪಯಣ ಬೆಳೆಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣ ದಲ್ಲಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ. ಕೆಲ ಬಿಜೆಪಿ ಕಾರ್ಯಕರ್ತರೂ ಜಿಟಿಡಿ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಜೆಡಿಎಸ್ ತೊರೆದು ಬಿಜೆಪಿ ಗೆ ಬನ್ನಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಆಹ್ವಾನ ನೀಡಿ ಪೋಸ್ಟ್ ಹಾಕಲಾಗಿದೆ. 

ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರ ನಿಮಗೆ ಮೋಸ ಮಾಡಿದೆ.  ಒಬ್ಬ ಮುಖ್ಯ ಮಂತ್ರಿ ಯನ್ನ ಸೋಲಿಸಿದ ನಿಮ್ಮನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಂಡಿಲ್ಲ. ಹುಣಸೂರಿನಲ್ಲಿಯೂ ನಿಮ್ಮ ಪುತ್ರನಿಗೆ ಅನ್ಯಾಯವಾಗಿದೆ. ಇದನ್ನೆಲ್ಲಾ ಮನಗಂಡು ಮರಳಿ ಬಿಜೆಪಿ ಆಗಮಿಸಬೇಕೆಂದು ಪೋಸ್ಟ್ ಹಾಕಲಾಗಿದೆ.