ಚುನಾವಣಾ ಘೋಷಣೆಯಾದ ಬಳಿಕವೂ ಸಚಿವ ರುದ್ರಪ್ಪ ಲಮಾಣಿ ಅವರು ಸರ್ಕಾರಿ ವಾಹನ ಹಾಗೂ ಭದ್ರತೆ ಬಳಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಘಿಸಿದರು.

ಹಾವೇರಿ: ಚುನಾವಣಾ ಘೋಷಣೆಯಾದ ಬಳಿಕವೂ ಸಚಿವ ರುದ್ರಪ್ಪ ಲಮಾಣಿ ಅವರು ಸರ್ಕಾರಿ ವಾಹನ ಹಾಗೂ ಭದ್ರತೆ ಬಳಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದರು.

ಚುನಾವಣೆ ಘೋಷಣೆಯಾದ ಬಳಿಕವೂ ಅಂದರೆ ಬೆಳಗ್ಗೆ 11.30ರ ಸುಮಾರಿಗೆ ನಗರದ ಇಜಾರಿ ಲಕಮಾಪುರದಲ್ಲಿರುವ ತಮ್ಮ ಮನೆಯಿಂದ ಸರ್ಕಾರಿ ಹಾಗೂ ಭದ್ರತಾ ವಾಹನಗಳನ್ನು ಬಳಸಿಯೇ ಸಚಿವರು ಪ್ರವಾಸಿ ಮಂದಿರಕ್ಕೆ ಆಗಮಿಸಿದರು.

ಬಳಿಕ ಅಲ್ಲಿ ವಿಷಯ ತಿಳಿದು ಖಾಸಗಿ ವಾಹನದಲ್ಲಿ ತಮ್ಮ ಮುಂದಿನ ಪ್ರಯಾಣ ಬೆಳೆಸಿದರು.