ದೇವರ ಹಣೆ ಮೇಲೆ ಇರುವ ನಾಮ ಸೆಕ್ಸ್ ಸಂಕೇತ : ಚಾಟಿ

First Published 25, Jul 2018, 9:01 AM IST
RTI Activist Says Nama Is Sex Symbol
Highlights

ವೆಂಕಟೇಶ್ವರ ದೇವರ ಹಣೆ ಮೇಲಿನ ಮೂರು ನಾಮವು ಸೆಕ್ಸ್ ಸಂಕೇತ ಎಂಬ ಹೇಳಿಕೆ ನೀಡಿದ್ದ ಆರ್ಟಿಐ ಕಾರ್ಯಕರ್ತನನ್ನು ಬಂಧಿಸದ ಪೊಲೀಸರ ವಿರುದ್ಧ ಹೈ ಕೋರ್ಟ್ ಚಾಟಿ ಬೀಸಿದೆ.

ಬೆಂಗಳೂರು :  ವೆಂಕಟೇಶ್ವರ ದೇವರ ಹಣೆ ಮೇಲಿನ ಮೂರು ನಾಮವು ಸೆಕ್ಸ್ ಸಂಕೇತ ಎಂಬ ವಿವಾದಿತ ಹೇಳಿಕೆ ನೀಡಿದ್ದ ಆರ್‌ಟಿಐ  ಕಾರ್ಯಕರ್ತ ಟಿ.ನರಸಿಂಹಮೂರ್ತಿಯನ್ನು ಬಂಧಿಸಲು ವಿಳಂಬ ಮಾಡಿದ ಯಶವಂತಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್‌ಗೆ ಹೈಕೋರ್ಟ್ ಮಂಗಳವಾರ ಚಾಟಿ ಬೀಸಿದೆ.

ಪ್ರಕರಣ ಸಂಬಂಧ ದೂರು ದಾಖಲಿಸಿದರೂ ಯಶವಂತಪು ರ ಠಾಣಾ ಪೊಲೀಸರು ನರಸಿಂಹಮೂರ್ತಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಬಿ.ಎಂ.ಸುರೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಬೆಳಗಿನ ಕಲಾಪದಲ್ಲಿ ನ್ಯಾಯಮೂರ್ತಿ ಅರ ವಿಂದ ಕುಮಾರ್ ಅವರು ವಿಚಾರಣೆ ನಡೆಸಿದರು. ಅರ್ಜಿಯ ನ್ನು ಪರಿಶೀಲಿಸಿದ ನಾಯಮೂರ್ತಿಗಳು ಪೊಲೀಸರ ವಿರುದ್ಧ ಕಿಡಿಕಾರಿದರು.

‘ಹಿಂದು ಧರ್ಮದ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರು ರಸ್ತೆಯಲ್ಲಿ ಓಡಾಡಿಕೊಂಡಿದ್ದರೂ ಏಕೆ ಬಂಧಿಸಲಿಲ್ಲ? ಅನ್ಯಧರ್ಮದ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿದ್ದ ರೆ, ಆ ವೇಳೆಯೂ ಯಾವುದೇ ಕ್ರಮ ಜರುಗಿಸದೆ ಸುಮ್ಮನೆ ಇರುತ್ತಿದ್ರಾ, ನ್ಯಾಯ ಎಂಬುದು ಎಲ್ಲರಿಗೂ ಒಂದೇ ಆಗಿರ ಬೇಕಲ್ಲವೇ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸುವ ಮೂಲಕ ಯಶವಂತಪುರ ಠಾಣಾ ಇನ್ಸ್‌ಪೆಕ್ಟರ್ ವಿರುದ್ಧ ಅಸಮಾಧಾನ
ವ್ಯಕ್ತಪಡಿಸಿದರು. 

‘ದಕ್ಷಿಣ ಕನ್ನಡ, ಉಡುಪಿ ಮತ್ತು ಮಡಿಕೇರಿಯಲ್ಲಿ ಧರ್ಮದ ವಿಚಾರವಾಗಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಪ್ರಕರಣ ಸಂಬಂಧ ದೂರು ದಾಖಲಿ ಸಿಕೊಂಡು ಹಲವು ದಿನ ಕಳೆದರೂ ಆರೋಪಿಯನ್ನು ಬಂಧಿಸ ದಿರುವುದು ಸರಿಯಲ್ಲ. ಸಂಜೆ 4.30 ಕ್ಕೆ ಅರ್ಜಿಯನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಅಷ್ಟರೊಳಗೆ ನರಸಿಂಹ ಮೂರ್ತಿಯನ್ನು ಬಂಧಿಸದಿದ್ದರೆ ಯಶವಂತಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗುವುದು ಎಂದು ನ್ಯಾಯಮೂರ್ತಿಗಳು ತಾಕೀತು ಮಾಡಿ ಎಚ್ಚರಿಕೆ ನೀಡಿದರು. ಸಂಜೆ 4.30 ಕ್ಕೆ ಅರ್ಜಿ ಯನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊ ಳ್ಳಲಾಯಿತು. ಈ ವೇಳೆ ಸರ್ಕಾರಿ ವಕೀಲರು ವಾದಿಸಿ, ನರಸಿಂಹಮೂರ್ತಿಯನ್ನು ಮಧ್ಯಾಹ್ನ 2.30 ಕ್ಕೆ ಬಂಧಿಸಲಾಗಿದೆ ಎಂದು ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿಗಳು, ಅರ್ಜಿಯಲ್ಲಿನ ಮನವಿಯಂತೆ ನರಸಿಂಹ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಹೀಗಾಗಿ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥ ಪಡಿಸಿದರು. ನರಸಿಂಹ ಮೂರ್ತಿಯನ್ನು ನಗರದ 24 ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದರು. ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.

loader