ಆದಾಯ ತೆರಿಗೆ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ ನರಸಿಂಹಮೂರ್ತಿ ತೆರಿಗೆ ವಂಚಿಸಿ ಜನಾರ್ದನರೆಡ್ಡಿ ದುಂದು ವೆಚ್ಚದ ಮದುವೆ ಮಾಡುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಮದುವೆಯನ್ನು ವೈಭವೋಪೆತವಾಗಿ ನಡೆಸಲಾಗುತ್ತಿದೆ, ರೆಡ್ಡಿ ಮಗಳ ಮದುವೆಗೆ ಖರ್ಚಾಗುತ್ತಿರುವ ಹಣದ ಮೂಲ ಯಾವುದು? 40 ತಿಂಗಳು ಜೈಲು ವಾಸ ಅನುಭವಿಸಿದ್ದ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು(ನ.15): ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ದುಂದುವೆಚ್ಚ ಮಾಡುತ್ತಿದ್ದಾರೆಂದು ಆರ್'ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ.

ಆದಾಯ ತೆರಿಗೆ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ ನರಸಿಂಹಮೂರ್ತಿ ತೆರಿಗೆ ವಂಚಿಸಿ ಜನಾರ್ದನರೆಡ್ಡಿ ದುಂದು ವೆಚ್ಚದ ಮದುವೆ ಮಾಡುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಮದುವೆಯನ್ನು ವೈಭವೋಪೆತವಾಗಿ ನಡೆಸಲಾಗುತ್ತಿದೆ, ರೆಡ್ಡಿ ಮಗಳ ಮದುವೆಗೆ ಖರ್ಚಾಗುತ್ತಿರುವ ಹಣದ ಮೂಲ ಯಾವುದು? 40 ತಿಂಗಳು ಜೈಲು ವಾಸ ಅನುಭವಿಸಿದ್ದ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ 500, 1000 ಸಾವಿರ ನೋಟು ಚಲಾವಣೆ ರದ್ದುಪಡಿಸಿದೆ. ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, 600 ಕೋಟಿ ವೆಚ್ಚದಲ್ಲಿ ಮದುವೆ ಮಾಡುತ್ತಿದ್ದಾರೆ. ಇದು ಗೊತ್ತಿದ್ದರೂ ಆದಾಯ ತೆರಿಗೆ ಅಧಿಕಾರಿಗಳು ಮೌನವಹಿಸಿರುವುದೇಕೆ?. ರೆಡ್ಡಿ ಖರ್ಚು ಮಾಡುತ್ತಿರುವ ಹಣ ನೋಡಿಯೂ ಐಟಿ ಯಾಕೆ ದಾಳಿ ನಡೆಸುತ್ತಿಲ್ಲ?. ಈ ವಿಚಾರವಾಗಿ ಆದಾಯ ತೆರಿಗೆ ಅಧಿಕಾರಿಗಳು ಮದುವೆಯ ಖರ್ಚು ವೆಚ್ಚದ ಮಾಹಿತಿಯನ್ನು ಪಡೆಯಬೇಕು ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.