ಹೈದರಾಬಾದ್[ಅ.08]: ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದ ತೆಲಂಗಾಣ ರಾಜ್ಯ ಸಾರಿಗೆ ನಿಗಮದ 48 ಸಾವಿರ ನೌಕರರನ್ನು ವಜಾಗೊಳಿಸುವಂತೆ ಸಿಎಂ ಕೆ. ಚಂದ್ರಶೇಖರ್ ರಾವ್ ಾದೇಶ ಹೊರಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿಯ ಈ ಆದೇಶ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 50 ಸಾವಿರಕ್ಕೂ ಅಧಿಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಶುಕ್ರವಾರ ರಾತ್ರಿಯಿಂದ ಪ್ರತಿಭಟನೆಗೆ ಕುಳಿತಿದ್ದರು. ಶನಿವಾರ ಸಂಜೆ 6 ಗಂಟೆಯೊಳಗೆ ಈ ಪ್ರತಿಭಟನೆ ಕೈ ಬಿಡುವಂತೆ ಸರ್ಕಾರ ನೌಕರರಿಗೆ ಗಡುವು ನೀಡಿತ್ತು. ಸರ್ಕಾರ ಈ ಅದೇಶದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ತೊಡಗಿದ್ದ 49,200 ನೌಕಕರ ಪೈಕಿ 1200 ನೌಕರರು ಕೆಲಸಕ್ಕೆ ಮರಳಿದ್ದರು. ಆದರೆ ಹಠ ಬಿಡದೇ ಪ್ರತಿಭಟನೆ ಮುಂದುವರೆಸಿದ ನೌಕರರನ್ನು ಕೆಲಸದಿಂದ ವಜಗೊಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಸಿಆರ್ 'ಕೆಲಸ ಕಳೆದುಕೊಂಡವರ ಜೊತೆ ಮತ್ತೆ ರಾಜಿ ಮಾತುಕತೆಗೆ ಮುಂದಾಗುವ ಮಾತೇ ಇಲ್ಲ. ಹಬ್ಬದ ಸಮಯದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದು ದೊಡ್ಡ ಅಪರಾಧ. ಇದರಿಂದ ಸರ್ಕಾರಕ್ಕೆ 1,200 ಕೋಟಿ ರೂ. ನಷ್ಟವುಂಟಾಗಿದೆ. ಸಾಲದ ಮೊತ್ತ 5,000 ಕೋಟಿಗೇರಿಕೆ ಆಗಿದೆ' ಎಂದಿದ್ದಾರೆ.

ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಸರ್ಕಾರದ ಜೊತೆತೆ ವಿಲೀನಗೊಳಿಸಬೇಕು ಎಂದು ಸೇರಿದಂತೆ ಒಟ್ಟು 26 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಪ್ರತಿಭಟನೆ ಆರಂಭಿಸಿದ್ದರು.

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: