ನವದೆಹಲಿ: ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನಾಧಾರಿತ ‘ಸಂಜು’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗಿದೆ. 

ಆದರೆ, ಇಂತಹ ಋುಣಾತ್ಮಕ ವ್ಯಕ್ತಿತ್ವಗಳನ್ನು ವೈಭವೀಕರಿಸುವ ಚಿತ್ರಗಳು ಹೆಚ್ಚುತ್ತಿರುವುದಕ್ಕೆ ಆರೆಸ್ಸೆಸ್‌ ಕಳವಳ ವ್ಯಕ್ತಪಡಿಸಿದೆ. ಆರೆಸ್ಸೆಸ್‌ ಮುಖವಾಣಿ ‘ಪಾಂಚಜನ್ಯ’ದ ಮುಖಪುಟದಲ್ಲಿ ‘ಕಿರ್ದಾರ್‌, ದಾಗ್‌ದಾರ್‌’ ಎಂಬ ತಲೆಬರಹದಡಿ ಲೇಖನ ಪ್ರಕಟವಾಗಿದೆ. 

ಇಂತಹ ಚಿತ್ರಗಳು ಹೆಚ್ಚುತ್ತಿರುವ ಹಿಂದೆ ಗಲ್ಫ್  ಹಣವಿದೆಯೇ? ಮುಸ್ಲಿಂ ನಿರ್ಮಾಪಕರ ಗೌಪ್ಯ ಪ್ರಾಬಲ್ಯವಿದೆಯೇ? ಎಂದು ಜನರು ಪ್ರಶ್ನಿಸುತ್ತಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಲಾಗಿದೆ

ರಣಬೀರ್‌ ಮತ್ತು ಶಾರುಖ್‌ ನಟನೆಯ ಸಂಜು, ರಯೀಸ್‌ನಂತಹ ಚಿತ್ರಗಳ ಹಿಂದೆ ಭೂಗತ ಲೋಕದ ‘ಸಂಚು’ ಇದೆಯೇ? ಎಂದು ಪ್ರಶ್ನಿಸಲಾಗಿದೆ.