ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್ ಎಸ್ ಎಸ್ ಮುಖಂಡರೊಬ್ಬರು ವಿವಾದ ಸೃಷ್ಟಿ ಮಾಡಿದ್ದಾರೆ.
ನವದೆಹಲಿ (ಮಾ.02): ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್ ಎಸ್ ಎಸ್ ಮುಖಂಡರೊಬ್ಬರು ವಿವಾದ ಸೃಷ್ಟಿ ಮಾಡಿದ್ದಾರೆ.
ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ಹಿಂದಿರುವ ಕೇರಳ ಸಿಎಂ ವಿಜಯನ್ ರವರ ತಲೆಯನ್ನು ತಂದುಕೊಟ್ಟವರಿಗೆ 1 ಕೋಟಿ ಕೊಡುತ್ತೇನೆ ಎಂದು ಉಜ್ಜಯಿನಿಯ ಸಾ ಪ್ರಚಾರ್ ಪ್ರಮುಖ್ ಕುಂದನ್ ಚಂದ್ರಾವತ್ ಎನ್ನುವ ಆರ್ ಎಸ್ ಎಸ್ ಮುಖಂಡರೊಬ್ಬರು ಹೇಳಿದ್ದಾರೆ.
300 ಮಂದಿ ಪ್ರಚಾರಕರನ್ನು ಕೊಲ್ಲಲಾಗಿದೆ. ನಾವು 3 ಲಕ್ಷ ತಲೆಗಳ ಹಾರವನ್ನು ಭಾರತ ಮಾತೆಗೆ ಹಾಕುವುದಾಗಿ ಆಫರ್ ಮಾಡುತ್ತಿದ್ದೆವೆಂದು ಕಮ್ಯುನಿಸ್ಟರಿಗೆ ಎಚ್ಚರಿಕೆ ನೀಡಿದರು.
ಇದು ಚಂದ್ರಾವತ್ ರವರ ವೈಯಕ್ತಿಕ ಅಭಿಪ್ರಾಯವೇ ಹೊರತು ನಮ್ಮ ಅಭಿಪ್ರಾಯವಲ್ಲ ಎಂದು ಆರ್ ಎಸ್ ಎಸ್ ಹೇಳಿದೆ.
