ಕೊಲ್ಕತಾ (ಜೂ. 26): ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸಂಘಕ್ಕೆ ಸೇರುವವರ ಸಂಖ್ಯೆ ತೀವ್ರ ಹೆಚ್ಚಾಗಿದೆ. ಅದರಲ್ಲೂ, ಮುಖ್ಯವಾಗಿ ಅವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಅದರ ಪ್ರಮಾಣ ತೀವ್ರ ಏರಿಕೆಯಾಗಿದೆ ಎಂದು ಸಂಘದ ಹಿರಿಯ ನಾಯಕ ಬಿಪ್ಲಬ್‌ ರಾಯ್‌ ಹೇಳಿದ್ದಾರೆ.

ಜೂ.1ರಿಂದ ಜೂ.6 ರ ವರೆಗೆ ಆರೆಸ್ಸೆಸ್‌ ವೆಬ್‌ಸೈಟ್‌ ಮೂಲಕ ಸಂಘ ಸೇರ್ಪಡೆಗೆ 378 ಮಂದಿ ಮನವಿ ಸಲ್ಲಿಸಿದ್ದರು. ಮುಖರ್ಜಿ ಭಾಷಣ ಮಾಡಿದ್ದ ಜೂ.7ರಂದು ಒಂದೇ ದಿನ 1,779 ಅರ್ಜಿಗಳು ಬಂದಿವೆ. ಆ ನಂತರ ಪ್ರತಿ ದಿನ 1,200-1,300 ಸೇರ್ಪಡೆ ಅರ್ಜಿಗಳು ಸ್ವೀಕಾರವಾಗುತ್ತಿವೆ.