‘ದೇಶ ವಿರೋಧಿ ಶಕ್ತಿಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ’| ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿಡಿ| ಕಾನ್ಪುರದಲ್ಲಿ ಗಣರಾಜ್ಯೋತ್ಸವ ಭಾಷಣ ಮಾಡಿದ ಭಾಗವತ್| ಭಾರತದ ವಿಶ್ವಗುರುವಾಗಲು ಎಲ್ಲರೂ ಶ್ರಮಿಸಬೇಕು ಎಂದ ಭಾಗವತ್
ಕಾನ್ಪುರ(ಜ.27): ದೇಶ ವಿರೋಧಿ ಶಕ್ತಿಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ದೇಶದ ಪ್ರಗತಿ ಬಯಸದ ಈ ದುಷ್ಟ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಮೂಲಕ ತಮ್ಮ ಲಾಭ ಮಾಡಿಕೊಳ್ಳುತ್ತಿವೆ ಎಂದು ಹರಿಹಾಯ್ದರು.
ಯಾರ ವಿನಾಶವನ್ನೂ ನಾವು ಬಯಸುವುದಿಲ್ಲ, ಎಲ್ಲರೂ ಸಂತೋಷವಾಗಿರಬೇಕು ಎಂಬುದೇ ಸಂಘದ ಆಶಯ ಎಂದು ಭಾಗವತ್ ಈ ವೇಳೆ ಹೇಳಿದರು.
ಆದರೆ ದೇಶ ವಿರೋಧಿ ಶಕ್ತಿಗಳು ಶಾಂತಿ ನಾಶ ಮಾಡಲು ಪ್ರಯತ್ನಿಸುತ್ತಿದ್ದು, ಅವರ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಭಾಗವತ್ ಭರವಸೆ ನೀಡಿದರು.
ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಇರಿಸಿದ್ದು, ಪ್ರತಿಯೊಬ್ಬ ಭಾರತೀಯ ಈ ಕಾರ್ಯ ಸಾಧನೆಗೆ ನೆರವಾಗಬೇಕು ಎಂದು ಭಾಗವತ್ ಕರೆ ನೀಡಿದರು.
