ಪಶುವೈದ್ಯಕೀಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಮೋಹನ್ ಭಾಗವತ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿಯನ್ನು ನೀಡಲಾಗಿದೆಯೆಂದು  ನಾಗಪುರದ ಮೀನುಗಾರಿಕೆ ಹಾಗೂ ಪಶು ವಿಜ್ಞಾನ ವಿಶ್ವ ವಿದ್ಯಾಲಯವು ಹೇಳಿದೆ.

ನಾಗಪುರ (ಮಾ.09): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಮಹಾರಾಷ್ಟ್ರದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶುವೈದ್ಯಕೀಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಮೋಹನ್ ಭಾಗವತ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿಯನ್ನು ನೀಡಲಾಗಿದೆಯೆಂದು ನಾಗಪುರದ ಮೀನುಗಾರಿಕೆ ಹಾಗೂ ಪಶು ವಿಜ್ಞಾನ ವಿಶ್ವ ವಿದ್ಯಾಲಯವು ಹೇಳಿದೆ.

ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ನಡೆದ ಘಟಿಕೋತ್ಸವದಲ್ಲಿ ಮೂಲತ: ವೃತ್ತಿಯಲ್ಲಿ ಭಾಗವತ್ ಪಶು ವೈದ್ಯರಾಗಿರುವ ಭಾಗವತ್ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದಾರೆ.

ನಾನು ಬಹಳ ಹಿಂದೆ ಈ ವೃತ್ತಿಯನ್ನು ಬಿಟ್ಟುಬಿಟ್ಟಿದ್ದೇನೆ. ನಾನು ಪಡುತ್ತಿರುವ ಕಠಿಣ ಪರಿಶ್ರಮಗಳೆಲ್ಲವೂ ಸಮಾಜದ ಹಾಗೂ ದೇಶದ ಒಳಿತಿಗಾಗಿದೆ ಎಂದು ಈ ಸಂದರ್ಭದಲ್ಇ ಭಾಗವತ್ ಹೇಳಿದ್ದಾರೆ.