ಆರ್ ಬಿ ಐನಲ್ಲಿ ನಿತ್ಯ 3000 ಕೋಟಿ ರು. ಮೌಲ್ಯದ 500 ರು. ನೋಟು ಮುದ್ರಣ

First Published 7, May 2018, 10:48 AM IST
Rs 500 notes worth Rs 3,000 crore printed every day: Economic affairs secretary
Highlights

 ದೇಶದಲ್ಲಿ ಎದುರಾಗಿರುವ ನಗದು ಕೊರತೆ ನೀಗಿಸಲು ಆರ್‌ಬಿಐ ತನ್ನ ಮುದ್ರಣಾಲಯಗಳಲ್ಲಿ ಪ್ರತಿದಿನ ಒಟ್ಟಾರೆ 3000 ಕೋಟಿ ರು. ಮೌಲ್ಯದ 500 ರು. ನೋಟುಗಳನ್ನು ಮುದ್ರಿಸುತ್ತಿದೆ. 

ಮನಿಲಾ: ದೇಶದಲ್ಲಿ ಎದುರಾಗಿರುವ ನಗದು ಕೊರತೆ ನೀಗಿಸಲು ಆರ್‌ಬಿಐ ತನ್ನ ಮುದ್ರಣಾಲಯಗಳಲ್ಲಿ ಪ್ರತಿದಿನ ಒಟ್ಟಾರೆ 3000 ಕೋಟಿ ರು. ಮೌಲ್ಯದ 500 ರು. ನೋಟುಗಳನ್ನು ಮುದ್ರಿಸುತ್ತಿದೆ. 200 ಹಾಗೂ 100 ರು. ನೋಟುಗಳ ಮುದ್ರಣವನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

 ಆರ್‌ಬಿಐನ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಈ ವಿಷಯ ತಿಳಿಸಿದ್ದು, ಸದ್ಯ ದೇಶದಲ್ಲಿ ಶೇ.೮೫ರಷ್ಟು ಎಟಿಎಂಗಳಲ್ಲಿ ಹಣವಿದೆ. ನಗದು ಕೊರತೆಯ ಸಮಸ್ಯೆ ನಿವಾರಣೆಯಾಗಿದೆ. 

ನೋಟು ಮುದ್ರಣ ವನ್ನು ಹೆಚ್ಚಿಸಲಾಗಿದ್ದು, ದಿನಕ್ಕೆ 2500 ರಿಂದ 3000 ಕೋಟಿ ರು. ಮೌಲ್ಯದ 500 ರು. ನೋಟು ಪ್ರಿಂಟ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

loader