ರೈಲು ಪ್ರಯಾಣದ ವೇಳೆ ಹೀಗೆ ನಡೆದುಕೊಂಡರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಎದುರಿಸಬೇಕಾದೀತು. ರೈಲು ಪ್ರಯಾಣದ ವೇಳೆ ಮಹಿಳೆಯರನ್ನು ಚುಡಾಯಿಸಿದರೆ ಇಂತಹ ಶಿಕ್ಷೆ ಶೀಘ್ರ ಜಾರಿಯಾಗುವ ಸಾಧ್ಯತೆ ಇದೆ. 

ನವದೆಹಲಿ: ರೈಲು ಪ್ರಯಾಣದ ವೇಳೆ ಮಹಿಳೆಯರನ್ನು ಚುಡಾಯಿಸಿದರೆ ದೋಷಿಗಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಶೀಘ್ರ ಜಾರಿಗೆ ಬರುವ ಸಾಧ್ಯತೆ ಇದೆ. ಇಂಥದ್ದೊಂದು ಪ್ರಸ್ತಾಪವೊಂದನ್ನು ರೈಲ್ವೆ ಭದ್ರತಾ ದಳವು ಪ್ರಸ್ತಾಪ ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಹಾಲಿ ಇರುವ ರೈಲ್ವೆ ಕಾಯ್ದೆಗೆ ಈ ಅಂಶಗಳನ್ನು ಸೇರಿಸಿ ಅದನ್ನು ಜಾರಿಗೆ ತರಲಾಗುವುದು. 

ಇತ್ತೀಚಿನ ದಿನಗಳಲ್ಲಿ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. 

2014 - 16ರಲ್ಲಿ ಇಂಥ ಕೇಸುಗಳ ಸಂಖ್ಯೆಯಲ್ಲಿ ಶೆ. 35ರಷ್ಟು ಏರಿಕೆ ಆಗಿತ್ತು.