ಬೆಂಗಳೂರು[ಮಾ.07]: ಸಿಎಂ ಸ್ವಕ್ಷೇತ್ರ ರಾಮನಗರದಲ್ಲಿ ಪುಂಡರ ಆಟ ಹೆಚ್ಚಾಗಿದೆ. ಶಿವರಾತ್ರಿ ಹಬ್ಬದ ದಿನದಂದು ಹಾಡಹಗಲೇ ಕಾರಿನಲ್ಲಿ ಗನ್ ಹಿಡಿದು ನಡುರಸ್ತೆಯಲ್ಲೇ ರಾಜಾ ರೋಷವಾಗಿ ಕಾರಿನಲ್ಲಿ ಓಡಾಡುತ್ತಿದ್ದಾರೆ.

KA 02  Z 7031 ನಂಬರ್ನ ಕಾರಿನಲ್ಲಿ ಗನ್ ಹಿಡಿದು ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಗನ್ ಹಿಡಿದು ದಾರಿಯುದ್ದಕ್ಕೂ ಜನರನ್ನು ಹೆದರಿಸಿದ್ದಾನೆ. ಇನ್ನು ಈಗಾಗಲೇ ಸಿನೀಮಿಯ ರೀತಿಯ ಈ ಬೆದರಿಕೆಗೆ ಜನರು ಆತಂಕಗೊಂಡಿದ್ದಾರೆ.

ಸಿಎಂ ಕ್ಷೇತ್ರದಲ್ಲೇ ಈ ರೀತಿ ಪುಂಡರ ಆಟ ಹೆಚ್ಚಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗನ್ ಪ್ರದರ್ಶಿಸಿದ್ದಕ್ಕೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಕಾನೂನು ಪ್ರಕಾರ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಬೇಕಿದೆ. ಆದರೆ ಈವರೆಗೂ ಪೊಲೀಸರು ಆತ ಯಾರು ಎಂಬುದನ್ನು ಇನ್ನೂ ಕೂಡಾ ಕಂಡು ಹಿಡಿದಿಲ್ಲ.

"

ಸುವರ್ಣ ನ್ಯೂಸ್ ಈಗಾಗಲೇ ಪೊಲೀಸರಿಗೆ ಸಾಕ್ಷಿ ಕೊಟ್ಟಿದ್ದು, ಕ್ರಮ ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.