ರೌಡಿಶೀಟರ್ ನಾಗರಾಜ್ ದಿನಕ್ಕೊಂದು ಸ್ಪೋಟಕ ಮಾಹಿತಿ ಬಾಯ್ಬಿಡುತ್ತಿದ್ದಾನೆ. ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ನಾಗರಾಜ್ ನನ್ನ ಮನೆಯಲ್ಲಿ ನಡೆದ ದಾಳಿ ಸಂದರ್ಭದಲ್ಲಿ  ಎಲ್ಲಿದ್ದೆ ಎನ್ನುವುದರ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ.

ಬೆಂಗಳೂರು(ಮೇ.16): ರೌಡಿಶೀಟರ್ ನಾಗರಾಜ್ ದಿನಕ್ಕೊಂದು ಸ್ಪೋಟಕ ಮಾಹಿತಿ ಬಾಯ್ಬಿಡುತ್ತಿದ್ದಾನೆ. ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ನಾಗರಾಜ್ ನನ್ನ ಮನೆಯಲ್ಲಿ ನಡೆದ ದಾಳಿ ಸಂದರ್ಭದಲ್ಲಿ ಎಲ್ಲಿದ್ದೆ ಎನ್ನುವುದರ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ.

'ಸಾರ್, ನಾ ಅವತ್ತು ಮನೆಯಲ್ಲೇ ಇದ್ದೆ. ಹೆಣ್ಣೂರು ಪೊಲೀಸರು ಬಂದದ್ದು, ನನ್ನ ಮನೆಯ ಬೀಗ ಹೊಡೆದದ್ದು ಎಲ್ಲವೂ ಕೂಡಾ ನಾನು ಸಿಸಿಟಿವಿ ಯಲ್ಲಿ ನೋಡ್ತಾ ಇದ್ದೆ. ಬೆಳಿಗ್ಗೆ ಸುಮಾರು ಏಳು ಗಂಟೆ ಸುಮಾರಿಗೆ ನನ್ನ ಮನೆಯ ಪಕ್ಕದಲ್ಲಿರುವ ನನ್ನ ಅಳಿಯ ಬಾಯಪ್ಪ ಮನೆ ಮೂಲಕ, ನಾನು ಹೊರಗೆ ಬಂದೆ. ಅಲ್ಲೇ ಶ್ರೀರಾಮಪುರ ಪೊಲೀಸರು ಇದ್ದರು. ಅವರು ನನ್ನ ನೋಡಿಯೂ ಸುಮ್ಮನಿದ್ದರು, ನಾನು ಅವರ ಬಗ್ಗೆ ತಲೆಕೆಡಿಸಕೊಳ್ಳಲಿಲ್ಲ. ಆಟೋ ಹತ್ತಿಕೊಂಡು, ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್​ಗೆ ಬಂದೆ. ಅಲ್ಲಿಂದ ಜೋಳಾರ್​ ಪೇಟೆಗೆ ಹೋಗಿ ದೇವಸ್ಥಾನವೊಂದರಲ್ಲಿ ತಂಗಿದ್ದೆ. ಅವತ್ತೇ ಸಾಯಂಕಾಲ, ಬೈಯಪ್ಪ ನಮಗೆ ಹೋಮ್ನಿ ಕಾರು ಕೊಟ್ಟು ಹೋದ. ಆ ಮೇಲೆ ಅದರಲ್ಲಿಲ್ಲಿ ಟ್ರಾವೆಲ್ ಮಾಡಿಕೊಂಡಿದ್ದೆವು'

ಎಂದು ನಾಗ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.