ಈ ಸಂದರ್ಭದಲ್ಲಿ ಫರ್ನಿಚರ್​ ಅಂಗಡಿಯ ಸಿಬ್ಬಂದಿ ಅವರನ್ನು ಬಿಡಿಸಲು ಬಂದಿದ್ದರಿಂದ ಅವರಿಗೂ ಹೊಡೆತಗಳು ಬಿದ್ದಿದೆ.

ಬೆಂಗಳೂರು(ಫೆ.10): ಫರ್ನಿಚರ್​ ಅಂಗಡಿಯಲ್ಲಿ ಕುಡಿದ ಕೆಲ ಪುಡಿ ರೌಡಿಗಳು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ಮಾರತ್​ ಹಯಳ್ಳಿಯಲ್ಲಿ ನಡೆದಿದೆ. ಮಾರತ್​ಹಳ್ಳಿ ಬಳಿ ಓಆರ್ ಆರ್​ ಫರ್ನಿಚರ್​ ಅಂಗಡಿಯಲ್ಲಿ ಕುಡಿದ ಅಮಲಿನಲ್ಲಿ ನುಗ್ಗಿದ ಕೆಲ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಫರ್ನಿಚರ್​ ಅಂಗಡಿಯ ಸಿಬ್ಬಂದಿ ಅವರನ್ನು ಬಿಡಿಸಲು ಬಂದಿದ್ದರಿಂದ ಅವರಿಗೂ ಹೊಡೆತಗಳು ಬಿದ್ದಿದೆ. ಇನ್ನು ಕೆ ಎ 01 ಹೆಚ್​ ಕೆ 2531 ಎಂಬ ವಾಹನದಲ್ಲಿ ಬಂದಿದ್ದ ಇವರು ಅಲ್ಲಿದ್ದ ಕೆಲ ಫರ್ನಿಚರ್​ಗಳನ್ನು ಹಾಳುಗೆಡವಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.