ಕಪ್ಪು ಹಣ ಹಾಗೂ ನಕಲಿ ನೋಟ್ ನಿಯಂತ್ರಿಸಲು ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ನೋಟ್ ನಿಷೇಧಿಸಿದ ಬೆನ್ನಲ್ಲೇ ಒಡಿಶಾದಲ್ಲಿ 10 ರೂಪಾಯಿ ನಾಣ್ಯ ನಿಷೇಧಿಸಲಾಗಿದೆ ಎಂಬ ವದಂತಿ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.
ಭುವನೇಶ್ವರ(ನ.16): ಕಪ್ಪು ಹಣ ಹಾಗೂ ನಕಲಿ ನೋಟ್ ನಿಯಂತ್ರಿಸಲು ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ನೋಟ್ ನಿಷೇಧಿಸಿದ ಬೆನ್ನಲ್ಲೇ ಒಡಿಶಾದಲ್ಲಿ 10 ರೂಪಾಯಿ ನಾಣ್ಯ ನಿಷೇಧಿಸಲಾಗಿದೆ ಎಂಬ ವದಂತಿ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.
ಮಾರುಕಟ್ಟೆಯಲ್ಲಿ ಎರಡು ಮಾದರಿಯ 10 ರೂಪಾಯಿಯ ನಕಲಿ ನಾಣ್ಯಗಳು ಚಲಾವಣೆಯಾಗುತ್ತಿದ್ದು, ಇದನ್ನು ತಡೆಯಲು ಆರ್ ಬಿಐ 10 ರೂಪಾಯಿ ನಾಣ್ಯಗಳನ್ನು ನಿಷೇಧಿಸಿದೆ ಎಂಬ ವದಂತಿ ಒಡಿಶಾದಲ್ಲಿ ಹರಿದಾಡುತ್ತಿದೆ.
ಈ ವದಂತಿಯಿಂದಾಗಿ ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು 10 ರೂಪಾಯಿಯ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಅಲ್ಲದೆ ಚಿಲ್ಲರೆ ವ್ಯಾಪಾರಿಗಳು ಕೂಡ 10 ರೂಪಾಯಿ ನಾಣ್ಯ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
