ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು  ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು  ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

ಬೆಂಗಳೂರು (ಅ.22): ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಸ್ ಎಸ್ ಎಲ್ ಸಿ ಓದುತ್ತಿರುವ ಹರ್ಷನ ಬಲಗೈಯನ್ನು ಪುಂಡರು ಕತ್ತರಿಸಿದ್ದಾರೆ. ಸುಂಕದಕಟ್ಟೆಯಲ್ಲಿರುವ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ⁠⁠ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಕೈಯನ್ನು ಜೋಡಿಸಿದ್ದಾರೆ.

ಸುಮಾರು 20 ಮಂದಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಕಿರಣ್ ಅಲಿಯಾಸ್ ಕರಿಬಾಂಡ್ಲಿ, ದರ್ಶನ್ ಅಲಿಯಾಸ್ ಪಾಪು, ಸಿಡಿ ಭರತ, ಶರತ್ ಅಲಿಯಾಸ್ ಶಾನ್ , ಪ್ರಶಾಂತ್ ಅಲಿಯಾಸ್ ಕೊಕ್ಕರೆ, ಅಭಿ ಮತ್ತು ಅನಿಲನಿಂದ ಎಂಬುವವರು ಇದರಲ್ಲಿ ಭಾಗಿಯಾಗಿದ್ದಾರೆ.