ಬಂಗಾಳ, ಒಡಿಶಾ ರಾಜ್ಯಗಳ ನಡುವೆ ರಸಗುಲ್ಲಾ ಮೂಲಕ್ಕಾಗಿ ಫೈಟ್: ಗೆದ್ದವರ್ಯಾರು

news | Tuesday, November 14th, 2017
Suvarna Web Desk
Highlights

ಬಹುತೇಕರು ಇದನ್ನು ಪಶ್ಚಿಮ ಬಂಗಾಳ ಮೂಲದ್ದು ಎಂದು ತಿಳಿದುಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ಒಡಿಶಾ ರಾಜ್ಯ ಈ ಸಿಹಿ ತಿಂಡಿ ತಮ್ಮ ಮೂಲದೆಂದು ವಾದಿಸುತ್ತಾ ಕಾನೂನು ಸಮರಕ್ಕೆ ಇಳಿದಿತ್ತು.

ಕೋಲ್ಕೊತ್ತಾ(ನ.14): ರಸಗುಲ್ಲಾ ಸಿಹಿ ಯಾರಿಗೆ ಗೊತ್ತಿಲ್ಲಾ ಹೇಳಿ. ವಿವಾಹ ಮುಂತಾದ ಸಮಾರಂಭಗಳಲ್ಲಿ ಇದು ಇದ್ದೆ ಇರುತ್ತದೆ.  ಹೆಸರು ಕೇಳಿದರೆ ಒಮ್ಮೆ ರುಚಿ ಸವಿಯಬೇಕಿಸುತ್ತದೆ. ಆದರೆ ಈ ಸಿಹಿ ತಿಂಡಿಗಾಗಿ ಎರಡೂ ರಾಜ್ಯಗಳು ಕಾನೂನಿನ ಕದನಕ್ಕಿಳಿದಿವೆ.

ಬಹುತೇಕರು ಇದನ್ನು ಪಶ್ಚಿಮ ಬಂಗಾಳ ಮೂಲದ್ದು ಎಂದು ತಿಳಿದುಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ಒಡಿಶಾ ರಾಜ್ಯ ಈ ಸಿಹಿ ತಿಂಡಿ ತಮ್ಮ ಮೂಲದೆಂದು ವಾದಿಸುತ್ತಾ ಕಾನೂನು ಸಮರಕ್ಕೆ ಇಳಿದಿತ್ತು. ಎರಡೂ ರಾಜ್ಯಗಳ ನಡುವಿನ ಫೈಟ್'ನಲ್ಲಿ ಈಗ ಬಂಗಾಳಕ್ಕೆ ಜಯ ಲಭಿಸಿದೆ.

2 ವರ್ಷಗಳ ವಾದದಲ್ಲಿ ಟ್ರೇಡ್ ಮಾರ್ಕ್ಸ್(ಜಿಐ) ಹಾಗೂ ಜಿಯೋಗ್ರಾಫಿಕಲ್ ಇಂಡಿಕೇಶನ್  ಸಂಸ್ಥೆ ರಸಗುಲ್ಲಾ ಸಹಿತಿಂಡಿ ಮೂಲತಃ ಪಶ್ಚಿಮ ಬಂಗಾಳ ಮೂಲದೆಂದು ತೀರ್ಪು ನೀಡಿದೆ. ಜಿಐ ಸಂಸ್ಥೆಯ ಸಹಾಯಕ ರಿಜಿಸ್ಟ್ರಾರ್ ಚೆನ್ನರಾಜ ಜಿ ನಾಯ್ಡು ' ರಸಗುಲ್ಲಾ  ಬಂಗಾಳ ಮೂಲದೆಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಒಡಿಶಾ ಮತ್ತು ಬಂಗಾಳ ರಸಗುಲ್ಲಾ ತಮ್ಮ ಮೂಲದೆಂದು ವಾದಿಸುತ್ತಾ ಟ್ರೇಡ್ ಮಾರ್ಕ್ಸ್(ಜಿಐ) ಹಾಗೂ ಜಿಯೋಗ್ರಾಫಿಕಲ್ ಇಂಡಿಕೇಶನ್  ಸಂಸ್ಥೆಗೆ ದೂರು ನೀಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ' ರಸಗುಲ್ಲ ವಿಜಯಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

 

Comments 0
Add Comment

    Related Posts