ಹಾಲಿ ಶಾಸಕ, ಸಚಿವ ರೋಷನ್ ಬೇಗ್ ಈ ಕ್ಷೇತ್ರವನ್ನು ಮಗ ರುಮನ್ ಬೇಗ್‌ಗೆ ಬಿಟ್ಟು ಕೊಟ್ಟು, ರಾಜ್ಯಸಭೆಗೆ ಆಯ್ಕೆಯಾಗುವ ಇರಾದೆ ಹೊಂದಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ, ಪಕ್ಷದ ಮೂಲಗಳ ಪ್ರಕಾರ ಪ್ರಸ್ತುತ ಚುನಾವಣೆಗೆ ರೋಷನ್‌ಬೇಗ್ ಅವರೇ ಅಭ್ಯರ್ಥಿ.

ಬೆಂಗಳೂರು : ಹಾಲಿ ಶಾಸಕ, ಸಚಿವ ರೋಷನ್ ಬೇಗ್ ಈ ಕ್ಷೇತ್ರವನ್ನು ಮಗ ರುಮನ್ ಬೇಗ್‌ಗೆ ಬಿಟ್ಟು ಕೊಟ್ಟು, ರಾಜ್ಯಸಭೆಗೆ ಆಯ್ಕೆಯಾಗುವ ಇರಾದೆ ಹೊಂದಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ, ಪಕ್ಷದ ಮೂಲಗಳ ಪ್ರಕಾರ ಪ್ರಸ್ತುತ ಚುನಾವಣೆಗೆ ರೋಷನ್‌ಬೇಗ್ ಅವರೇ ಅಭ್ಯರ್ಥಿ.

ಬಿಜೆಪಿಯಿಂದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಮಾಜಿ ಶಾಸಕ ನಿರ್ಮಲ್‌ಕುಮಾರ್ ಸುರಾನಾ ಹಾಗೂ ಸ್ಥಳೀಯ ಮುಖಂಡ ಗೋಪಿ ಹೆಸರುಗಳು ಕೇಳಿಬರುತ್ತಿವೆ. ಕಟ್ಟಾ ಅವರಿಗೆ ಟಿಕೆಟ್ ಕೊಟ್ಟಲ್ಲಿ ರೋಷನ್ ಬೇಗ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡುವ ಅವಕಾಶವಿದೆ ಎಂಬ ಅಭಿಪ್ರಾಯವನ್ನು ವರಿಷ್ಠರಿಗೆ ರವಾನಿಸಲಾಗಿದೆ.

ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾರೆ ಎಂಬ ಕಳಂಕದ ಭೀತಿ ಎದುರಾದಲ್ಲಿ ಸುರಾನಾ ಅಥವಾ ಹೊಸಮುಖ ಗೋಪಿಗೆ ಅವಕಾಶ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜೆಡಿಎಸ್‌ನಿಂದ ಪ್ರಬಲ ಹುರಿಯಾಳುಗಳಿಗೆ ಹುಡುಕಾಟ ನಡೆದಿದೆ.