ರೋಹಿಣಿ ಸಿಂಧೂರಿ – ಸಚಿವ ಮಂಜು ನಡುವೆ ಮುಂದುವರಿದ ಸಮರ

First Published 9, Apr 2018, 9:07 AM IST
Rohini Sindhuri Give Notice To A Manju
Highlights

ಹಾಸನ ಜಿಲ್ಲಾಧಿಕಾರಿ ಹಾಗೂ ಸಚಿವರ ನಡುವಿನ ಸಮರ ಮುಂದುವರಿದಿದೆ.  ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ - ಸಚಿವ ಮಂಜು ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.

ಹಾಸನ : ಹಾಸನ ಜಿಲ್ಲಾಧಿಕಾರಿ ಹಾಗೂ ಸಚಿವರ ನಡುವಿನ ಸಮರ ಮುಂದುವರಿದಿದೆ.  ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ - ಸಚಿವ ಮಂಜು ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.  

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಎ. ಮಂಜುಗೆ ನೋಟಿಸ್ ಜಾರಿ ಮಾಡಲಾಗಿದೆ. ಅರಕಲಗೂಡು ಚುನಾವಣಾ ಅಧಿಕಾರಿ ಮೂಲಕ  ನೋಟಿಸ್ ನೀಡಲಾಗಿದೆ. ಎರಡು ದಿನಗಳಲ್ಲಿ ಈ ಸಂಬಂಧ  ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.

ನೀತಿ ಸಂಹಿತೆ ಬಳಿಕ ಬಗರ್ ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ನೀಡಿದ್ದು, ಈ ಸಂಬಂಧ ಇದೀಗ ನೋಟಿಸ್ ನೀಡಲಾಗಿದೆ. ಇನ್ನು ಅರಕಲಗೂಡು ತಹಸಿಲ್ದಾರ್ ಪ್ರಸನ್ನ ಮೂರ್ತಿ ಹಾಗು ಸಚಿವ ಎ.ಮಂಜುಗೆ ನೋಟಿಸ್ ನೀಡಿದ್ದು, ಸಚಿವರ ವಿರುದ್ದ ಮತ್ತೊಂದು ಎಫ್.ಐ.ಆರ್ ದಾಖಲಿಸಲು ನಡೆದಿದೆಯಾ ಸಿದ್ದತೆ ಎನ್ನುವ ಪ್ರಶ್ನೆ ಇದೀಗ ಮೂಡಿದೆ.

ಸಭೆ ನಡೆಸದೆಯೇ 800ಕ್ಕೂ ಹೆಚ್ಚು ಅರ್ಜಿಗಳ ವಿಲೆಮಾಡಿರೊ ಆರೋಪ ಎದುರಾಗಿದ್ದು,  ಅರ್ಜಿಗಳನ್ನ‌ ತಿದ್ದಿ,ಅನರ್ಹರಿಗೆ ಸಾಗುವಳಿ ಚೀಟಿ‌ ನೀಡಿರುವ ಬಗ್ಗೆ ಕೂಡ ಸಂಶಯ ಮೂಡಿದೆ.

loader