ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಕೆ

Rohini Sindhuri fighting transfer battle
Highlights

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ ಸಿಎಟಿ ಅಂಗಳಕ್ಕೆ ಹೋಗಿದ್ದು, ಇದೀಗ ಹೈ ಕೋರ್ಟ್ ಸಿಎಟಿ ಆದೇಶವನ್ನು ರದ್ದು ಮಾಡಿದೆ. ಹೈ ಕೋರ್ಟ್ ವಿಭಾಗೀಯ ಪೀಠದಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶ ರದ್ದುಗೊಂಡಿದೆ. 

ಬೆಂಗಳೂರು :  ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ ಸಿಎಟಿ ಅಂಗಳಕ್ಕೆ ಹೋಗಿದ್ದು, ಇದೀಗ ಹೈ ಕೋರ್ಟ್ ಸಿಎಟಿ ಆದೇಶವನ್ನು ರದ್ದು ಮಾಡಿದೆ. ಹೈ ಕೋರ್ಟ್ ವಿಭಾಗೀಯ ಪೀಠದಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶ ರದ್ದುಗೊಂಡಿದೆ. 

ಸಿಎಟಿ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಲ್ಲದೇ ಸಿಎಟಿ ಆದೇಶದ ಬಗ್ಗೆ  ಹೈ ಕೋರ್ಟ್ ತೀವ್ರ ಅಸಮಾಧಾನವನ್ನು  ವ್ಯಕ್ತಪಡಿಸಿದೆ. ಅಲ್ಲದೇ ಈ ಅರ್ಜಿಯನ್ನು ಮತ್ತೆ ವಿಚಾರಣೆ ನಡೆಸಿ ಸೂಕ್ತ ಆದೇಶವನ್ನು ನೀಡುವಂತೆ ಸಿಎಟಿಗೆ ಹೈ ಕೋರ್ಟ್ ನಿರ್ದೇಶನ ನೀಡಿದೆ.

ಅಲ್ಲದೇ ರೋಹಿಣಿ ಸಿಂಧೂರಿ ಅಲ್ಲಿಯವರೆಗೂ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದು, ಏಪ್ರಿಲ್ 2ಕ್ಕೆ ಸಿಎಟಿ ವಿಚಾರಣೆ  ದಿನಾಂಕ ನಿಗದಿ ಮಾಡಲಾಗಿದೆ.

loader