ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್‌ ಬಳಕೆಯಾಗಬಹುದು ಎಂದು ಎಣಿಸಲಾಗಿದೆ. ಚೊಚ್ಚಲ ಮಾನವಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿಯ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿಕೊಳ್ಳುತ್ತಿದೆ.
ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್ ಬಳಕೆಯಾಗಬಹುದು ಎಂದು ಎಣಿಸಲಾಗಿದೆ. ಚೊಚ್ಚಲ ಮಾನವಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿಯ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿಕೊಳ್ಳುತ್ತಿದೆ.
ಆಂಧ್ರದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಈ ರಾಕೆಟ್ 8 ಟನ್ ಗಾತ್ರದವರೆಗಿನ ವಸ್ತುಗಳನ್ನೂ ನಭೋಮಂಡಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ವದೇಶಿ ನಿರ್ಮಿತ ರಾಕೆಟ್ ಇದಾಗಿದ್ದು, 640 ಟನ್ ತೂಕವಿದೆ. ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿರುವ ಐದು ಜಂಬೋಜೆಟ್ ವಿಮಾನಗಳಿಗೆ ಈ ತೂಕ ಸಮ ಎಂಬುದು ಗಮನಾರ್ಹ. ಈ ರಾಕೆಟ್ ನಿರ್ಮಾಣಕ್ಕೆ 300 ಕೋಟಿ ರು. ವೆಚ್ಚವಾಗಿದೆಯಾದರೂ, ಭಾರತದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲಿನ ಅವಲಂಬನೆ ತಪ್ಪುವುದರಿಂದ ಅಷ್ಟೇ ಮೊತ್ತ ಉಳಿತಾಯವಾಗಲಿದೆ.
(ಸಾಂದರ್ಭಕ ಚಿತ್ರ)
