ತಾಂತ್ರಿಕ ದೋಷದಿಂದ ಕೆಟ್ಟು ನಿಂತ ರಾಕೆಟ್! ಅಂತರಾಷ್ಟ್ರೀಯ ಬಾಹ್ಯಾಕಾಶಕ್ಕೆ ಹೊರಟಿದ್ದ ರಾಕೆಟ್! ರಾಕೆಟ್ ನಲ್ಲಿ ನಾಸಾದ ಇಬ್ಬರು ಗಗನಯಾತ್ರಿಗಳು! ಕಜಾಕಿಸ್ತಾನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ರಾಕೆಟ್! ಇಬ್ಬರೂ ಗಗನಯಾತ್ರಿಗಳು ಸುರಕ್ಷಿತ ಎಂದು ತಿಳಿಸಿದ ನಾಸಾ
ಮಾಸ್ಕೋ(ಅ.11): ಬಾಹ್ಯಾಕಾಶ ಕ್ಷೇತ್ರವನ್ನು ಕೆಲಹೊತ್ತು ಆತಂಕಕ್ಕೆ ತಳ್ಳಿದ ಘಟನೆ ಇದು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್ ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ಕಜಾಕಿಸ್ತಾನದಲ್ಲಿ ನಡೆದಿದೆ.
ರಷ್ಯಾದ ಸ್ಪೇಸ್ ಏಜೆನ್ಸಿಗೆ ಸೇರಿದ ಈ ರಾಕೆಟ್ ಗಗನಯಾತ್ರಿಗಳನ್ನು ಹೊತ್ತು ನಭಕ್ಕೆ ಚಿಮ್ಮುತ್ತಿದ್ದಂತೇ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದೆ. ಅಲ್ಲದೇ ವೇಗವಾಗಿ ಭೂಮಿಯತ್ತ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದೆ.
ಕೂಡಲೇ ರಾಕೆಟ್ ನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಶ್ವಿಯಾದ ಗಗನಯಾತ್ರಿಗಳು, ರಾಕೆಟ್ ನ್ನು ಸುರಕ್ಷಿತವಾಗಿ ಕಜಾಕಿಸ್ತಾನದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ರಾಕೆಟ್ ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಟಿದ್ದ ನಾಸಾದ ನಿಕ್ ಹಾಗ್ಯೂ ಮತ್ತು ಅಲೆಸ್ಕಿ ಓವಿಶಿನಿನ್ ಗಗನಯಾತ್ರಿಗಳು ಈ ರಾಕೆಟ್ ನಲ್ಲಿದ್ದರು ಎನ್ನಲಾಗಿದೆ. ಈ ಕುರಿತುಇ ಟ್ವೀಟ್ ಮಾಡಿರುವ ನಾಸಾ, ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
