ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆ

First Published 28, Feb 2018, 10:40 AM IST
Rock climber Jyothi Raj Traced
Highlights

ಜೋಗ ಜಲಪಾತದಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್​​ ಪತ್ತೆಯಾಗಿದ್ದಾರೆ. ರಾಜಾ ಫಾಲ್ಸ್​ನ ಬಂಡೆಯಲ್ಲಿ  ಜ್ಯೋತಿರಾಜ್ ಕುಳಿತಿದ್ದರು ಎನ್ನಲಾಗಿದೆ.

ಸಾಗರ : ಜೋಗ ಜಲಪಾತದಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್​​ ಪತ್ತೆಯಾಗಿದ್ದಾರೆ. ರಾಜಾ ಫಾಲ್ಸ್​ನ ಬಂಡೆಯಲ್ಲಿ  ಜ್ಯೋತಿರಾಜ್ ಕುಳಿತಿದ್ದರು ಎನ್ನಲಾಗಿದೆ.

ಬಂಡೆಯ ಬಳಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇದ್ದ ಕಾರಣ ಅವರು ನಿಶ್ಶಕ್ತರಾಗಿ ಅಲ್ಲಿಯೇ ಕುಳಿತಿದ್ದರು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಜ್ಯೋತಿರಾಜ್’ರನ್ನು ಪತ್ತೆ ಮಾಡಿದ್ದಾರೆ.

ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೋರ್ವರ ಮೃತದೇಹದ ಪತ್ತೆಗೆಂದು ಜೋಗ ಗುಂಡಿಯೊಳಗೆ ಇಳಿದಿದ್ದರು. ನಿನ್ನೆ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕೆಳಗೆ ಇಳಿದಿದ್ದ ಜ್ಯೋತಿರಾಜ್ ಮೇಲಕ್ಕೆ ಬಂದಿರಲಿಲ್ಲ.

loader