Asianet Suvarna News Asianet Suvarna News

ತಬ್ಬಿಕೊಂಡೇ 28 ಲಕ್ಷ ಸಂಪಾದಿಸ್ತಾಳೆ ಈಕೆ!

ಜಗತ್ತಿನಲ್ಲಿ ಚಿತ್ರ ವಿಚಿತ್ರ ವೃತ್ತಿಗಳಿವೆ. ಆದರೆ ಇಲ್ಲೊಬ್ಬ ಮಹಿಳೆ ಮಾಡುವ ವೃತ್ತಿ ನೋಡಿ ಅಚ್ಚರಿ ಹಾಗೂ ಹೆಮ್ಮೆಯಾಗುತ್ತೆ. ಗ್ರಾಹಕರನ್ನು ತಬ್ಬಿಕೊಂಡೇ ಈಕೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾಳೆ. ಅಷ್ಟಕ್ಕೂ ಆಕೆ ಯಾರು? ಇಲ್ಲಿದೆ ವಿವರ

robin stine earns 28 lakhs rupees a year just by hugging and cuddling people
Author
New Delhi, First Published Jan 14, 2019, 5:23 PM IST

ಜಗತ್ತಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದಾದ ಚಿತ್ರ ವಿಚಿತ್ರ ಉದ್ಯೋಗಗಳಿವೆ. ರಾಬಿನ್ ಸ್ಟೀನ್(Robin Stine) ಇಂತಹುದೇ ಕೆಲ ಮಾಡಿ ಪ್ರತಿ ವರ್ಷ ಲಕ್ಷಗಟ್ಟಲೆ ಸಂಪಾದಿಸುತ್ತಾಳೆ. ಆಕೆ ಜನರನ್ನು ಅಪ್ಪಿಕೊಳ್ಳುವ ಮೂಲಕ ಒತ್ತಡವನ್ನು ಕಡಿಮೆಗೊಳಿಸುತ್ತಾಳೆ. ಸದ್ಯ ಇದೇ ವಿಚಾರದಿಂದ ರಾಬಿನ್ ಚರ್ಚೆಯಲ್ಲಿದ್ದು, ಅಪ್ಪಿಕೊಳ್ಳಲು ಇವರಿಗೆ ಭಾರೀ ಮೊತ್ತ ನೀಡಲಾಗುತ್ತದೆ. ಕನ್ಸಾಸ್ ಎಂಬ ನಗರದಲ್ಲಿ ನಿವಾಸಿಯಾಗಿರುವ ರಾಬಿನ್ ಪ್ರತಿ ವರ್ಷ 40 ಸಾವಿರ ಡಾಲರ್ಸ್ ಸಂಪಾದಿಸುತ್ತಾರೆ[ಸುಮಾರು 28 ಲಕ್ಷ] ಸಂಪಾದಿಸುತ್ತಾರೆ. ಪ್ರೊಫೆಶನಲ್ ಕಡ್ಲಿಂಗ್ ಸರ್ವಿಸ್[ಅಪ್ಪಿಕೊಳ್ಳುವ ಸೇವೆ] ನೀಡುವ ಇವರನ್ನು 'Cuddlist' ಎಂಬ ವೆಬ್ ಸೈಟ್ ಮೂಲಕ ಸಂಪರ್ಕಿಸಲಾಗುತ್ತದೆ. ಇವರು ಒಂದು ಗಂಟೆಯ ಸೇವೆಗೆ ಸುಮಾರು 80 ಡಾಲರ್[5 ಸಾವಿರಕ್ಕೂ ಅಧಿಕ] ಮೊತ್ತ ಪಡೆಯುತ್ತಾರೆ.

ಮೈ ತುಂಬಾ ಬಟ್ಟೆ ಇರಲೇಬೇಕು:

ಇನ್ನು ಅಪ್ಪಿಕೊಳ್ಳುವಾಗ ಕೆಲವೊಂದು ನಿಯಮಗಳನ್ನೂ ಪಾಲಿಸಬೇಕಾಗುತ್ತದೆ. ಮೊದಲನೆಯದಾಗಿ ಗ್ರಾಹಕರು ಮೈ ತುಂಬಾ ಬಟ್ಟೆ ಧರಿಸಿರಬೇಕು. 1 ರಿಂದ 4 ಗಂಟೆಗಳ ಸೆಷನ್ ಮಾಡುವ ರಾಬಿನ್ ಈ ಸಂದರ್ಭದಲ್ಲಿ ಗ್ರಾಹಕರನ್ನು ಕೇವಲ ಅಪ್ಪಿಕೊಂಡಿರುತ್ತಾರೆ. ತಮ್ಮ ವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ರಾಬಿನ್ 'ನನಗೆ ಈ ವೃತ್ತಿ ಖುಷಿ ನೀಡುತ್ತದೆ. ಅಪ್ಪಿಕೊಳ್ಳುವುದರಿಂದ ದೇಹದಲ್ಲಿರುವ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ' ಎಂದಿದ್ದಾರೆ. ಇವರ ಬಳಿ ಕೇವಲ ಏಕಾಂಗಿಯಾಗಿರುವ ಗ್ರಾಹಕರಷ್ಟೇ ಅಲ್ಲದೇ, ಮದುವೆಯಾದ ಜೋಡಿಗಳು ಹಾಗೂ ವಿಚ್ಛೇದನ ಪಡೆದ ವ್ಯಕ್ತಿಗಳೂ ಪ್ಪಿಕೊಂಡು ಒತ್ತಡ ಕಡಿಮೆಗೊಳಿಸಲು ಬರುತ್ತಾರೆ.

ಗ್ರಾಹಕರನ್ನು ಅಪ್ಪಿಕೊಳ್ಳುವ ರಾಬಿನ್ ಅವರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುತ್ತಾರೆ ಹಾಗೂ ಮುಂದೆ ಅವರೇನು ಮಾಡಲು ಬಯಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಯತ್ನಿಸುತ್ತಾರೆ. ತಮ್ಮ ಈ ವೃತ್ತಿಯಿಂದ ಅವರು ಹಲವಾರು ಮಂದಿಯ ಜೀವನವನ್ನೇ ಬದಲಾಯಿಸಿದ್ದಾರೆ. ಅಲ್ಲದೇ ತಮ್ಮಲ್ಲೂ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ.

ರಾಬಿನ್ 'ಫಿಬ್ರೋಮಯಾಲೀಜಿಯಾ' ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಅವರು ಗ್ರಾಹಕರನ್ನು ಅಪ್ಪಿಕೊಂಡು ತಮ್ಮ ನೋವು ಹಾಗೂ ಒತ್ತಡವನ್ನೂ ಕಡಿಮೆಗೊಳಿಸುತ್ತಾರೆ. ರಿಲೇಷನ್ ಶಿಪ್ ನಲ್ಲಿರುವ ರಾಬಿನ್ 'ನನ್ನ ವೃತ್ತಿಯಿಂದ ನನ್ನ ಪ್ರಿಯಕರನಿಗೆ ಯಾವುದೇ ಸಮಸ್ಯೆ ಇಲ್ಲ. ಇದು ತಪ್ಪಲ್ಲ ಎಂಬುವುದು ಅವರಿಗೂ ತಿಳಿದಿದೆ' ಎನ್ನುತ್ತಾರೆ.

Follow Us:
Download App:
  • android
  • ios