ವಿಧಾನಸೌಧದಲ್ಲಿ ಸಹಾಯಕ ಗ್ರಂಥಪಾಲಕರಾಗಿರುವ ವೆಂಕಟರಾಮು ಅವರ ಮೈಸೂರು ರಸ್ತೆಯ ಬಾಪೂಜಿ ಲೇಔಟ್'ನ ಬಾಡಿಗೆ ಮನೆಯಲ್ಲಿ ಬರೋಬ್ಬರಿ 36 ಲಕ್ಷ ನಗದು, 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

ಬೆಂಗಳೂರು(ಆ.27): ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮನೆಯಲ್ಲಿ ಲಕ್ಷಾಂತರ ನಗದು ಹಾಗೂ ಚಿನ್ನಾಭರಣ ಕಳುವಾಗಿದೆ.

ವಿಧಾನಸೌಧದಲ್ಲಿ ಸಹಾಯಕ ಗ್ರಂಥಪಾಲಕರಾಗಿರುವ ವೆಂಕಟರಾಮು ಅವರ ಮೈಸೂರು ರಸ್ತೆಯ ಬಾಪೂಜಿ ಲೇಔಟ್'ನ ಬಾಡಿಗೆ ಮನೆಯಲ್ಲಿ ಬರೋಬ್ಬರಿ 36 ಲಕ್ಷ ನಗದು, 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವೆಂಕಟರಾಮು ಅವರು ಹೊಸ ಬಾಡಿಗೆ ಮನೆಗೆ ವರ್ಗಾವಣೆಯಾಗುಗುವ ಹಿನ್ನಲೆಯಲ್ಲಿ ಹೊಸ ಮನೆಯಲ್ಲಿ ಹಾಲು ಉಕ್ಕಿಸಲು ಕುಟುಂಬ ಸಮೇತ ಹೋಗಿ ವಾಪಸ್ ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಚಂದ್ರಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.