ಬೆಂಗಳೂರು(ಸೆ. 29): ಕಳೆದ ರಾತ್ರಿ ರಾಜಧಾನಿಯಲ್ಲಿ ಗ್ರೇಟ್ ರಾಬರಿಯೊಂದು ನಡೆದಿದೆ. ಬರೋಬ್ಬರಿ 10 ಲಕ್ಷ ಹಣ ತೆಗೊಂಡು ಹೋಗ್ತಿದ್ದ ಸ್ಟೀಲ್ ಶಾಪ್ ಮ್ಯಾನೇಜರ್ ರಮೇಶ್ ಎಂಬುವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.
ಹೊಸಗುಡ್ಡದಹಳ್ಳಿಯ ರಂಗನಾಥ್ ಕಾಲೋನಿಯ ಸ್ಟೀಲ್ ಶಾಪ್ ವ್ಯಾಪಾರಿ ದೀಪಕ್ ಜೈನ್ ಕೆಲವು ದಿನಗಳಿಂದ ಬಾಕಿ ಹಣ ವಸೂಲಿ ಮಾಡಿರಲಿಲ್ಲ. ನಿನ್ನೆ ಬುಧವಾರ ರಮೇಶ್ ಅವರು ನಗರ್ತಪೇಟೆ ಸುತ್ತಲಿನ ಅಂಗಡಿಗಳಲ್ಲಿ ಸುಮಾರು 10.3 ಲಕ್ಷ ರೂ. ಪೇಮೆಂಟ್ ಕಲೆಕ್ಟ್ ಮಾಡಿ ಹಣವನ್ನು ಆಕ್ಟಿವಾ ಬೈಕ್ ಡಿಕ್ಕಿಯಲ್ಲಿ ಬ್ಯಾಗಿಟ್ಟುಕೊಂಡು ಬರುತ್ತಿರುತ್ತಾರೆ. ಇವರ ಮೇಲೆಯೇ ದುಷ್ಕರ್ಮಿಗಳು ಕಣ್ಣಿಟ್ಟಿರುತ್ತಾರೆ. ಮೈಸೂರು ಫ್ಲೈ ಓವರ್ ಸಮೀಪ ನಾಲ್ವರು ಚೋರರು ಚಾಕು ತೋರಿಸಿ ಹೆದರಿಸುತ್ತಾರೆ. ನಂತರ ರಮೇಶ್'ಗೆ ಇರಿದು 10 ಲಕ್ಷ ರೂ. ಇದ್ದ ಬ್ಯಾಗ್ ಕಿತ್ಕೊಂಡು ಪರಾರಿಯಾಗುತ್ತಾರೆ.
ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ ಕಸಿದು ಪರಾರಿ ಆಗುತ್ತಿದ್ದಂತೆ ರಮೇಶ್ ಕಿರುಚಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಸ್ ಬುಕ್ ಮಾಡಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.
- ಚೇತನ್, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್
