ಬೆಂಗಳೂರು[ಜೂ.20]: ಸಿಲಿಕಾನ್ ಸಿಟಿಯಲ್ಲಿ ಹೊಸ ದರೋಡೆ ಗ್ಯಾಂಗ್ ಎಂಟ್ರಿ ಕೊಟ್ಟಿದೆ.  ಒಂಟಿ ಮಹಿಳೆಯರನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡಿಕೊಳ್ಳುತ್ತದೆ.

ಸಿಖ್ ಧಾರ್ಮಿಕ ಗುರುಗಳ ವೇಷದಲ್ಲಿ ಬರುವ ಇವರು ಒಂಟಿ ಮಹಿಳೆಯರನ್ನು ಗುರಿಪಡಿಸಿಕೊಂಡು ದೇಣಿಗೆಗೆ ಹಣ ಕೇಳುವ ನೆಪದಲ್ಲೆ ದರೋಡೆ ಮಾಡುತ್ತಾರೆ.
ಎಚ್ ಎ ಎಲ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ದರೋಡೆ ನಡೆಸಿದ್ದು ಆರೋಪಿಗಳಿಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಹಲವು ಕಡೆ ಇದೇ ರೀತಿಯಲ್ಲಿ ದರೋಡೆ ಪ್ರಕರಣಗಳು ನಡೆದಿದ್ದು ಪೊಲೀಸರು ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.