ಸುಮಾರು 40 ವರ್ಷದ ಹಿಂದೆ ಸರ್ಕಾರದಿಂದ ಜಮೀನು ಸಿಗುತ್ತಿದ್ದಂತೆ ಈ ಕುಟುಂಬದಲ್ಲಿ ಸಂಭ್ರಮವೇ ಸಂಭ್ರಮ. ಸರ್ಕಾರದಿಂದ ನೀಡಿರೋ ಕೊಂಚ ಜಮೀನಿನಲ್ಲಿ ಕಾಫಿ ತೋಟ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡರು, ಆದರೆ ಅತ್ಯವಶ್ಯವಾಗಿ ಬೇಕಿರುವ ರಸ್ತೆ ಮಾತ್ರ ಇನ್ನೂ ಸಿಕ್ಕಿಲ್ಲ.
ಚಿಕ್ಕಮಗಳೂರು(ಅ.12): ಸುಮಾರು 40 ವರ್ಷದ ಹಿಂದೆ ಸರ್ಕಾರದಿಂದ ಜಮೀನು ಸಿಗುತ್ತಿದ್ದಂತೆ ಈ ಕುಟುಂಬದಲ್ಲಿ ಸಂಭ್ರಮವೇ ಸಂಭ್ರಮ. ಸರ್ಕಾರದಿಂದ ನೀಡಿರೋ ಕೊಂಚ ಜಮೀನಿನಲ್ಲಿ ಕಾಫಿ ತೋಟ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡರು, ಆದರೆ ಅತ್ಯವಶ್ಯವಾಗಿ ಬೇಕಿರುವ ರಸ್ತೆ ಮಾತ್ರ ಇನ್ನೂ ಸಿಕ್ಕಿಲ್ಲ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅವಂತಿ ಗ್ರಾಮದ ಜನರ ದುಸ್ಥಿತಿಗೀಡಾಗಿದೆ. ಸರ್ಕಾರವೇ ಇವರಿಗೆ ಭೂಮಿ ಕೊಟ್ಟು 40 ವರ್ಷ ಕಳೆದ್ರೂ ಇನ್ನೂ ಇವರಿಗೆ ರಸ್ತೆ ಭಾಗ್ಯ ಮಾತ್ರ ಸಿಕ್ಕೇ ಇಲ್ಲ. ಹಾಗಾಗಿಯೇ ಇವರಿಗೆ ಭದ್ರಾ ನದಿಯಲ್ಲಿ ಜೀವವನ್ನ ಪಣಕ್ಕಿಟ್ಟು ನಿತ್ಯ ತೆಪ್ಪದಲ್ಲಿಯೇ ಓಡಾಡಬೇಕಾದ ದೌಭಾಗ್ಯ ಒದಗಿದೆ.
40 ವರ್ಷದ ಹಿಂದೆಯೇ ಆದಿವಾಸಿಗಳಿಗೆ ಸರ್ಕಾರ ಜಮೀನು ನೀಡಿದೆ. ಇಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಕಾಫಿ ತೋಟ , ಅಡಿಕೆ ತೋಟಗಳಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರೋ ಇವರಿಗೆ ಭದ್ರಾ ನದಿಯ ತೆಪ್ಪವೇ ಗತಿ. ಮಕ್ಕಳು ಶಾಲೆಗೆ ಹೋಗೋಕೂ ಸಹ ನಿತ್ಯ ತೆಪ್ಪವನ್ನೇ ಅವಲಂಭಿಸುವಂತಾಗಿದೆ. ಆದ್ರೆ ನೀರಿನ ಹರಿವು ಹೆಚ್ಚಾದಾಗ ಮಾತ್ರ ಪಟ್ಟಣಕ್ಕೂ ಹೋಗುವಂತಿಲ್ಲ. ವಾರಗಟ್ಟಲೇ ಮಕ್ಕಳು ಶಾಲೆಗೂ ಹೋಗುವಂತಿಲ್ಲ.
ಇವರು ಇಷ್ಟು ಕಷ್ಟ ಪಡುತ್ತಿದ್ರೂ ಇವರ ನೋವಿಗೆ ಜನಪ್ರತಿನಿಧಿಗಳು ಮಾತ್ರ ಸ್ಪಂದಿಸುತ್ತಿಲ್ಲ ಒಟ್ಟಾರೆ ರಸ್ತೆಯಿಲ್ಲದೇ ನಿತ್ಯ ನರಕದಿಂದಲೇ ಬದುಕು ಸಾಗಿಸ್ತಾ ಇರೋ ಕುಟುಂಬಕ್ಕೆ ರಸ್ತೆ ಬೇಕಾಗಿದ್ದು, ಅಧಿಕಾರಿಗಳು ಮಾತ್ರ ಸರ್ಕಾರಿ ನಕ್ಷೆಯಲ್ಲಿ ಇದ್ರೂ ರಸ್ತೆ ಕಲ್ಪಿಸುತ್ತಿಲ್ಲ.
