ನಾಮಪತ್ರ ಸಲ್ಲಿಸುವಾಗ ಮೂವರ ಸೂಚಕರ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ನಾಪತ್ರವನ್ನು ತಿರಸ್ಕರಿಸಲಾಗಿದೆ' ಎಂದು ಚುನಾವಣಾ ಆಯೋಗ ತಿಳಿಸಿದೆ.

ಚೆನ್ನೈ(ಡಿ.05): ತೀವ್ರ ಕುತೂಹಲ ಮೂಡಿಸಿದ್ದ ಆರ್.ಕೆ. ನಗರ ಉಪಚುನಾವಣೆಯ ನಟ ವಿಶಾಲ್ ಸ್ಪರ್ಧೆ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ನಾಮಪತ್ರ ಸಲ್ಲಿಸುವಾಗ ಮೂವರ ಸೂಚಕರ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ನಾಪತ್ರವನ್ನು ತಿರಸ್ಕರಿಸಲಾಗಿದೆ' ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದ್ದು ಆರೋಪಿಸಿರುವ ನಟ ವಿಶಾಲ್ ಹಾಗೂ ಆತನ 50ಕ್ಕೂ ಬೆಂಬಲಿಗರು ಧರಣಿ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಶಾಲ್ ಸ್ಪತಂತ್ರವಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರು. ತಮಿಳು ಚಿತ್ರನಟ ಪ್ರಸ್ತುತ ದಕ್ಷಿಣ ಭಾರತ ಚಿತ್ರ ಕಲಾವಿದರ ಸಂಘದ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾರೆ.