ಈ ವೇಳೆ ತಮ್ಮ ವಯಸ್ಸು ಹಾಗೂ ಅನಾರೋಗ್ಯವನ್ನು ಪರಿಗಣಿಸಿ ಕಡಿಮೆ ಶಿಕ್ಷೆ ನೀಡುವಂತೆ ಲಾಲು ಕೋರಿಕೊಂಡರು.

ರಾಂಚಿ(ಜ.05): ಮೇವು ಹಗರಣದಲ್ಲಿ ದೋಷಿಗಳಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಇತರ 10 ಮಂದಿಯ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ಸಿಬಿಐ ಕೋರ್ಟ್ ಶನಿವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಿದೆ. ಡಿ. 23ರಂದು ದೋಷಿ ಎಂದು ಘೋಷಿಸಲ್ಪಟ್ಟ ಬಳಿಕ ಬಿರ್ಸಾ ಮುಂಡಾ ಕೇಂದ್ರೀಯ ಜೈಲಿನಲ್ಲಿರುವ ಲಾಲು, ಶಿಕ್ಷೆಯ ಪ್ರಮಾಣದ ಕುರಿತ ವಾದ ಮಂಡನೆಗೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು.

ಈ ವೇಳೆ ತಮ್ಮ ವಯಸ್ಸು ಹಾಗೂ ಅನಾರೋಗ್ಯವನ್ನು ಪರಿಗಣಿಸಿ ಕಡಿಮೆ ಶಿಕ್ಷೆ ನೀಡುವಂತೆ ಲಾಲು ಕೋರಿಕೊಂಡರು. ಉಭಯ ಬಣಗಳ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಶನಿವಾರ ಮಧ್ಯಾಹ್ನ 2 ಗಂಟೆಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿತು.