ಸ್ವಾತಂತ್ರ್ಯ ಎಂದರೇನು? ಉತ್ತರವನ್ನು ಒಂದೇ ವಾಕ್ಯದಲ್ಲಿಯೋ ಒಂದೇ ಶಬ್ದದಲ್ಲಿಯೋ ಹೇಳಲಾಗದು. ಆದರೆ ನಿಜವಾದ ಸ್ವಾತಂತ್ರ್ಯ ಸಿಕ್ಕಾಗ ಮನುಷ್ಯನ ಸಂತಸ ಹೇಗಿರುತ್ತದೆ ಎಂಬುದಕ್ಕೆ ರಿಯಾದ್‌ನ ಈ ಉದಾಹರಣೆ ಶತ ಶತಮಾನಕ್ಕೂ ಒಂದು ನಿದರ್ಶನವಾಗಿ ನಿಲ್ಲಬಹುದು.
ರಿಯಾದ್ [ಜೂ.24] ಸ್ವಾತಂತ್ರ್ಯ ಎಂದರೇನು? ಉತ್ತರವನ್ನು ಒಂದೇ ವಾಕ್ಯದಲ್ಲಿಯೋ ಒಂದೇ ಶಬ್ದದಲ್ಲಿಯೋ ಹೇಳಲಾಗದು. ಆದರೆ ನಿಜವಾದ ಸ್ವಾತಂತ್ರ್ಯ ಸಿಕ್ಕಾಗ ಮನುಷ್ಯನ ಸಂತಸ ಹೇಗಿರುತ್ತದೆ ಎಂಬುದಕ್ಕೆ ರಿಯಾದ್‌ನ ಈ ಉದಾಹರಣೆ ಶತ ಶತಮಾನಕ್ಕೂ ಒಂದು ನಿದರ್ಶನವಾಗಿ ನಿಲ್ಲಬಹುದು.
ಮಧ್ಯರಾತ್ರಿಯಲ್ಲಿ ಕಾರು ಏರಿದ ಆಕೆ ಹೊರಟ ತಕ್ಷಣ ದಾರಿಯೂದ್ದಕ್ಕೂ ಅಭಿನಂದನೆಗಳು ಸಿಗುತ್ತವೆ. ಯುವ ಜೋಡಿಗಳು ಹರ್ಷದಿಂದ ಆಕೆಯನ್ನು ಕೈ ಬೀಸಿ ಬರಮಾಡಿಕೊಳ್ಳುತ್ತಾರೆ. ಹೆಣ್ಮಕ್ಕಳ ಗುಂಪು ಹೂಗುಚ್ಛ ನೀಡಿ ಸಂಭ್ರಮಿಸುತ್ತದೆ.
ಇದೆಲ್ಲ ನಡೆದಿದ್ದು ರಿಯಾದ್‌ನಲ್ಲಿ. ರಿಯಾದ್ ಹೆಣ್ಣು ಮಕ್ಕಳಿಗೆ ವಾಹನ ಚಲಾಯಿಸುವ ಸ್ವಾತಂತ್ರ್ಯ ಸಿಕ್ಕಿದೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡಬಾರದು ಎಂಬ ನಿಷೇಧದಿಂದ ಮುಕ್ತಿ ಪಡೆದುಕೊಂಡಿದ್ದಾರೆ.
ಸುದ್ದಿ ವಾಹಿನಿಯೊಂದರ ನಿರೂಪಕಿಯಾದ ಸಮರ್ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಕಾರು ಏರುತ್ತಾರೆ. ಇದಾದ ಮೇಲೆ ಅನೇಕ ಮಹಿಳೆಯರು ಕಾರು ಚಲಾಯಿಸಿ ನಗರದಲ್ಲಿ ಸುತ್ತಾಡುತ್ತಾರೆ.
