ರಿಯೋ ಡಿ ಜನೈರೋ(ಸೆ.10): ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಶನಿವಾರ ಐತಿಹಾಸಿಕ ದಿನ. ಒಂದೇ ದಿನ ತಲಾ ೧ ಚಿನ್ನ ಹಾಗೂ ಕಂಚಿನ ಪದಕದ ಸಾಧನೆ ಮಾಡಿದ ಭಾರತೀಯ ಅಥ್ಲೀಟ್ ಗಳು ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ನಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಮರಿಯಪ್ಪನ್ ತಂಗವೇಲು ಪುರುಷರ ಟಿ-೪೨ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು.
ತಂಗವೇಲು ಸೇಲಂನಿಂದ ೫೦ ಕಿ.ಮೀ. ದೂರದ ಕುಗ್ರಾಮದಿಂದ ಈ ಎತ್ತರ ತಲುಪಿದ್ದಾರೆ. ೫ ವರ್ಷದ ಬಾಲಕನಾಗಿದ್ದ ತಂಗವೇಲು ಶಾಲೆಗೆ ಹೋಗುತ್ತಿದ್ದಾಗ ಬಸ್ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ಗುರಿಯಾಗಿದ್ದರು.
ಇದೇ ವಿಭಾಗದಲ್ಲಿ ವರುಣ್ ಸಿಂಗ್ ಭಾಟಿ ಕಂಚಿನ ಪದಕದ ಸಾಧನೆ ಮಾಡಿದರು. ಇದರೊಂದಿಗೆ ಒಂದೇ ವಿಭಾಗ ದಲ್ಲಿ ಇಬ್ಬರು ಭಾರತೀಯರು ಪದಕ ಸಾಧನೆ ಮಾಡಿದ ಮತ್ತೊಂದು ಐತಿಹಾಸಿಕ ಸಾಧನೆಗೆ ರಿಯೊ ಸಾಕ್ಷಿಯಾಯಿತು.
ಪ್ಯಾರಾಲಿಂಪಿಕ್ಸ್ನಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಕನ್ನಡಿಗ ಕೋಚ್ ಸತ್ಯನಾರಾಯಣ್ ಗರಡಿಯಲ್ಲಿ ಇವರಿಬ್ಬರು ಅಭ್ಯಾಸ ನಡೆಸಿದ್ದರು. ರಿಯೋದಿಂದ ಸುವರ್ಣ ನ್ಯೂಸ್ಗೆ ಸತ್ಯನಾರಾಯಣ್ ಧನ್ಯವಾದ ಸಲ್ಲಿಸಿದ್ದಾರೆ.
