ಮೊದಲ ಬಾರಿಗೆ ರಿಲಯನ್ಸ್ ಜಿಯೋಗೆ ₹504 ಕೋಟಿ ಲಾಭ

First Published 20, Jan 2018, 1:21 PM IST
RIL quarterly profit jumps a quarter Jio opens account
Highlights

2016ರ ಸೆಪ್ಟೆಂಬರ್‌ನಲ್ಲಿ ಟೆಲಿಕಾಮ್ ಉದ್ಯಮಕ್ಕೆ ಕಾಲಿಟ್ಟ ರಿಲಯನ್ಸ್ ಜಿಯೋ ಮೊದಲ 6 ತಿಂಗಳು ಉಚಿತ ಕರೆ ಮತ್ತು ಡೇಟಾ ಸೌಲಭ್ಯ ನೀಡಿತ್ತು.

ನವದೆಹಲಿ(ಜ.20): ಉಚಿತ ಆಫರ್ ಮೂಲಕ ಟೆಲಿಕಾಂ ವಲಯದಲ್ಲಿ ಹೊಸ ಅಲೆ ಮೂಡಿಸಿದ್ದ ಮತ್ತು ನಷ್ಟದಲ್ಲಿದ್ದ ರಿಲಯನ್ಸ್ ಜಿಯೋ ಇದೇ ಮೊದಲ ಬಾರಿ ಲಾಭದ ಹಾದಿಗೆ ಬಂದಿದೆ.

ಡಿಸೆಂಬರ್'ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಯೋ 504 ಕೋಟಿ ರು. ಲಾಭ ಗಳಿಸಿದೆ. ಜಿಯೋ ಗ್ರಾಹಕರ ಸಂಖ್ಯೆ 2017 ಡಿ.31ರಂದು 16 ಕೋಟಿ ತಲುಪಿದೆ. ಈ ಹಿನ್ನೆಲೆಯಲ್ಲಿ ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಯೋ ಆದಾಯ 6,879 ಕೋಟಿ ರು.ಗೆ ಏರಿಕೆಯಾಗಿದೆ.

2016ರ ಸೆಪ್ಟೆಂಬರ್‌ನಲ್ಲಿ ಟೆಲಿಕಾಮ್ ಉದ್ಯಮಕ್ಕೆ ಕಾಲಿಟ್ಟ ರಿಲಯನ್ಸ್ ಜಿಯೋ ಮೊದಲ 6 ತಿಂಗಳು ಉಚಿತ ಕರೆ ಮತ್ತು ಡೇಟಾ ಸೌಲಭ್ಯ ನೀಡಿತ್ತು.

loader