ಬಿಎಸ್ ವೈ ಭಂಟ ಕಾ.ಪು. ಸಿದ್ದಲಿಂಗಸ್ವಾಮಿಗೆ ಬೈಗುಳಬಿಎಸ್’ವೈ ಸೋದರಿ ಪುತ್ರ ರಾಜೇಶ್ ಅಭಿಮಾನಿಯಿಂದ ಬೈಗುಳಬಿಜೆಪಿ ಟಿಕೆಟ್ ವಿಚಾರವಾಗಿ ಸಿದ್ದಲಿಂಗಸ್ವಾಮಿಗೆ ನಿಂದನೆವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಅಂತಾ ಕ್ಯಾತೆ ತೆಗೆದ ರಾಜೇಶ್!ರಾಜೇಶ್ ಬೆಂಬಲಿಗರಿಂದ ಸಿದ್ದಲಿಂಗಸ್ವಾಮಿ ಅವಮಾನ
ಮೈಸೂರು (ಮೇ.05): ಮೈಸೂರಿನ ಬಿಜೆಪಿಯಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಿನ್ನಮತ ಶುರುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೋದರಿ ಪುತ್ರನಾದ ರಾಜೇಶ್ ಬೆಂಬಲಿಗರು ಬಿಎಸ್’ವೈ ಬಂಟ ಕಾ.ಪು. ಸಿದ್ದಲಿಂಗಸ್ವಾಮಿಗೆ ವಾಟ್ಸಾಪ್’ನಲ್ಲಿ ಮನಬಂದಂತೆ ಬೈದಿದ್ದಾರೆ.
ಮೈಸೂರಿನ ವರುಣಾ ಕ್ಷೇತ್ರದಲ್ಲಿ ರಾಜೇಶ್ ಅಣ್ಣ ಅಂದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಇದ್ದ ಹಾಗೇ, ರಾಜೇಶ್ ಅಣ್ಣನೇ ವರುಣಾ ಕ್ಷೇತ್ರದ ಅಭ್ಯರ್ಥಿ. ನೀವೂ ಉಪ್ಪು ತಿಂದ ಮನೆಗೆ ಮೋಸ ಮಾಡಬೇಡಿ. ಒಂದು ವೇಳೆ ನೀವು ಅಭ್ಯರ್ಥಿಯಾಗಲು ಹೊರಟ್ಟರೇ ನಾವು ಸಮಾರಂಭದಲ್ಲಿಯೇ ಗಲಾಟೆ ಮಾಡುತ್ತೇವೆ ಎಂದು ರಾಜೇಶ್ ಅಭಿಮಾನಿಗಳು ಕಾ.ಪು. ಸಿದ್ದಲಿಂಗಸ್ವಾಮಿಗೆ ಧಮ್ಕಿ ಹಾಕಿದ್ದಾರೆ. ವಾಟ್ಸಾಪ್ನಲ್ಲಿ ನಡೆದ ಗಲಾಟೆಯ ಆಡಿಯೋ ಮಾಧ್ಯಮಗಳಿಗೆ ಸಿಕ್ಕಿದೆ.
