ರಾಹುಲ್ ಗಾಂಧಿ ಟೀಕೆಗೆ ನಿರ್ಮಲಾ ಸೀತಾರಾಮನ್ ಖಡಕ್ ತಿರುಗೇಟು

Rhetoric Of Loser  BJP  Nirmala Sitharaman On Rahul Gandhi Speech
Highlights

  ರಾಹುಲ್ ಗಾಂಧಿ​  ಟೀಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​  ತಿರುಗೇಟು ನೀಡಿದ್ದಾರೆ. 

ನವದೆಹಲಿ (ಮಾ. 18):  ರಾಹುಲ್ ಗಾಂಧಿ​  ಟೀಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​  ತಿರುಗೇಟು ನೀಡಿದ್ದಾರೆ. 

ರಾಹುಲ್​ ಗಾಂಧಿ ಭಾಷಣದಲ್ಲಿ ವಸ್ತು ನಿಷ್ಠೆಯ ಕೊರತೆಯಿದೆ.  ಮತ್ತೆ ಅದೇ ಅಪಹಾಸ್ಯ ಭಾಷಣವನ್ನೇ ಮಾಡಿದ್ದಾರೆ. ಹೀಗಾಗಿ  ಕಾಂಗ್ರೆಸ್​ ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್​ ವಾಗ್ದಾಳಿ ನಡೆಸಿದ್ದಾರೆ. 
ಬಿಜೆಪಿ ಯಾವಾಗಲೂ ರೈತರಪರವಿದೆ.  ಕಾಂಗ್ರೆಸ್​ ರೈತರಿಗೆ ಮೋಸ ಮಾಡಿದೆ. ಬಿಜೆಪಿ ದೇಶಭಕ್ತರ ಪರ, ಆದ್ರೆ ಕಾಂಗ್ರೆಸ್​ ಭಯೋತ್ಪಾದಕರಿಗಾಗಿ ಅಳುತ್ತಿದೆ.  ರಾಹುಲ್​ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ.  ರಾಹುಲ್ ಗಾಂಧಿ ಹಿಂದೂಗಳನ್ನು ಮತ್ತೆ ಅವಮಾನಿಸಿ, ಅಪಹಾಸ್ಯ ಮಾಡಿದ್ದಾರೆ.  ಕಾಂಗ್ರೆಸ್​ ಪಕ್ಷ  ಯಾವಾಗಲೂ ವೋಟ್​ಬ್ಯಾಂಕ್​ ರಾಜಕಾರಣ ಮಾಡುತ್ತದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಇದೇ ಕಾಂಗ್ರೆಸ್​ ಹೊರತು ಬಿಜೆಪಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ರಾಹುಲ್​ ಅಮಿತ್​ ಶಾ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.  ಆದರೆ ಅದು ಅಪ್ರಸ್ತುತ. ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್​ ಶಾ ಈಗಾಗಲೇ ಕ್ಲಿನ್​ಚಿಟ್​ ಪಡೆದಿದ್ದಾರೆ. ಆದರೆ ಇದನ್ನು ತಿಳಿಯದೇ ರಾಹುಲ್ ಗಾಂಧಿ ​ ಶಾ ಅವರನ್ನು ಕೊಲೆ ಆರೋಪಿ ಅಂತಾರೆ
ರಾಹುಲ್​ ಗಾಂಧಿ ಕೂಡ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಆರೋಪಿ..! ಎಂದು ಟಾಂಗ್ ನೀಡಿದ್ದಾರೆ. 
 

loader