ನವದೆಹಲಿ(ಡಿ.21): ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜಿಸುವುದು ಹಿಂದುಗಳ ನಂಬಿಕೆ. ಅದರಲ್ಲೂ ಗಂಗಾ ನದಿಯಲ್ಲಿ ವಿಸರ್ಜಿಸಿದರೆ ಅತ್ಯಂತ ಪುಣ್ಯ ಎಂಬ ನಂಬಿಕೆ ಇದೆ. ಆದರೆ, ಅಂತ್ಯಸಂಸ್ಕಾರದ ಅವಶೇಷಗಳನ್ನು ಮತ್ತು ಪೂಜೆಯ ಹೂವುಗಳನ್ನು ಗಂಗಾನದಿಯಲ್ಲಿ ವಿಸರ್ಜನೆ ಮಾಡಬೇಡಿ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಸಚಿವ ಸತ್ಯಪಾ ಲ್ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ.

ನಮಾಮಿ ಗಂಗೆ ಯೋಜನೆಗೆ ಸಂಬಂಧಿಸಿದ 34 ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಹರಿದ್ವಾರದಲ್ಲಿ ಮಾತನಾಡಿದ ಸತ್ಯಪಾಲ್ ಸಿಂಗ್, ಪೇಪರ್ ಪ್ಲೇಟನ ಮೇಲೆ ಹೂವುಗಳನ್ನು ತೇಲಿ ಬಿಡುವುದು ಮತ್ತು ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸುವ ಅಗತ್ಯವೇನೂ ಇಲ್ಲ ಎಂದು ಹೇಳಿದ್ದಾರೆ.

ಇದೇವೇಳೆ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ, ನದಿ ಪಾತ್ರದಲ್ಲಿ ಗ್ರಾಮೀಣ ಪ್ರದೇಶದವರು ಎಸೆಯುವ ತ್ಯಾಜ್ಯ ಹಾಗೂ ಕೃಷಿಗಾಗಿ ಬಳಸುವ ಕೆಮಿಕಲ್ಸ್'ಗಳಿಂದ ಗಂಗೆ ಮಲೀನಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.