ಇವರ ಹೆಸರು ಫೈಜುಲ್‌ ಖಾದ್ರಿ. ಅವರದ್ದು ಸುಖಮಯ ಜೀವನ. ಆದರೆ 2011ರಲ್ಲಿ ಪತ್ನಿ ತಾಜಾಮುಲಿ ಬೇಗಂ ನಿಧನರಾದಾಗ, ಫೈಜುಲ್‌ ನೊಂದಿದ್ದರು. ಹೀಗಾಗಿಯೇ ಪತ್ನಿಯ ಸನಿನೆನಪಿಗಾಗಿ ಆಗ್ರಾದಲ್ಲಿ ಶಹಜಹಾನ್‌ ತಾಜ್‌ಮಹಲ್‌ ಕಟ್ಟಿದಂತೆ ತಾವೂ, ಪತ್ನಿಯ ಹೆಸರಲ್ಲಿ ತಾಜ್‌ಮಹಲ್‌ ಕಟ್ಟಲು ನಿರ್ಧರಿಸಿದರು.
ಲಖನೌ(ಜೂ.25): ಇವರ ಹೆಸರು ಫೈಜುಲ್ ಖಾದ್ರಿ. ಅವರದ್ದು ಸುಖಮಯ ಜೀವನ. ಆದರೆ 2011ರಲ್ಲಿ ಪತ್ನಿ ತಾಜಾಮುಲಿ ಬೇಗಂ ನಿಧನರಾದಾಗ, ಫೈಜುಲ್ ನೊಂದಿದ್ದರು. ಹೀಗಾಗಿಯೇ ಪತ್ನಿಯ ಸನಿನೆನಪಿಗಾಗಿ ಆಗ್ರಾದಲ್ಲಿ ಶಹಜಹಾನ್ ತಾಜ್ಮಹಲ್ ಕಟ್ಟಿದಂತೆ ತಾವೂ, ಪತ್ನಿಯ ಹೆಸರಲ್ಲಿ ತಾಜ್ಮಹಲ್ ಕಟ್ಟಲು ನಿರ್ಧರಿಸಿದರು.
ಅದರಂತೆ ತಾಜಮಹಲ್ ನಿರ್ಮಾಣ ಕಾರ್ಯವೂ ಆರಂಭವಾಯಿತು. ಆದರೆ ಪೋಸ್ಟ್ಮಾಸ್ಟರ್ ಹುದ್ದೆಯಿಂದ ನಿವೃತ್ತಿಯಾಗಿದ್ದ ವೇಳೆ ಫೈಜುಲ್ಗೆ ಹೆಚ್ಚಿನ ಹಣವೇನೂ ಸಿಕ್ಕಿರಲಿಲ್ಲ. ಬಂದಷ್ಟು ಹಣವನ್ನು ತಾಜಮಹಲ್ಗೆ ವ್ಯಯಿಸಿದರು. ಆದರೆ ಆ ಹಣ ಯಾವುದಕ್ಕೂ ಸಾಲಲಿಲ್ಲ. ಇವರ ಈ ಪ್ರೇಮಕಥೆ ಕೆಲ ವರ್ಷಗಳ ಹಿಂದೆ ಅಂದಿನ ಉತ್ತರಪ್ರದೇಶ ಸಿಎಂ ಅಖಿಲೇಶ್ಸಿಂಗ್ ಯಾದವ್ ಕಿವಿಗೆ ಬಿತ್ತು. ಅವರು ಧನ ಸಹಾಯಕ್ಕೆ ಮುಂದಾದರು. ಆದರೆ ಪರರ ಹಣದಲ್ಲಿ ಪ್ರೀತಿಯ ಸ್ಮಾರಕ ನಿರ್ಮಾಣಕ್ಕೆ ಒಪ್ಪದ ಫೈಜುಲ್, ತಮಗೆ ಬರುವ ಪಿಂಚಣಿ ಹಣದಲ್ಲೇ ಕಟ್ಟುವ ನಿರ್ಧಾರಕ್ಕೆ ಬದ್ಧರಾದರು.
ಆದರೆ ಸಿಎಂಗೆ ಹಣ ನೀಡುವ ಬದಲು ತಮ್ಮ ಹಳ್ಳಿಗೊಂಡು ಹೆಣ್ಣುಮಕ್ಕಳ ಶಾಲೆ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿ ಸಿಎಂ ಶಾಲೆ ಮಂಜೂರು ಮಾಡಿದರು. ಶಾಲೆಗೆ ಜಾಗವನ್ನು ಫೈಜುಲ್ ತಾವೇ ನೀಡಿದರು. ಇದೀಗ ಶಾಲೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಫೈಜುಲ್ ಮಾತ್ರ, ತಾಜ್ಮಹಲ್ ಪೂರ್ಣಗೊಳಿಸಲು 6 ಲಕ್ಷ ಹಣ ಹೊಂದಿಸಲಾಗದೇ ಇನ್ನೂ ಪರದಾಡುತ್ತಿದ್ದಾರೆ.
