ಕೋಲ್ಕತಾ :  ಕೋಲ್ಕತಾದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ಸೂಸೈಡ್ ನೋಟ್ ನಲ್ಲಿ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿದ್ದಾರೆ. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಇದೀಗ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 

ಇದೇ ಮೊದಲ ಬಾರಿಗೆ ಇಂತಹ  ಘಟನೆಯಾಗಿದೆ. ಐಪಿಎಸ್ ಅಧಿಕಾರಿಯೋರ್ವರು ಸರ್ಕಾರದ ಬಗ್ಗೆ ತಮ್ಮ ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧಿಸಿ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ವಾಗ್ದಾಳಿ ನಡೆಸಿದ್ದಾರೆ. 

ನಾವಿದನ್ನು ನೆನಪಿಟ್ಟುಕೊಳ್ಳುತ್ತೇವೆ: ಸೋನಿಯಾಗೆ ಮಮತಾ ಎಚ್ಚರಿಕೆ!

ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿಯ ಆತ್ಮಹತ್ಯಾ ಪತ್ರ ಫುಲ್ ವೈರಲ್ ಆಗಿದ್ದು, ಈ ಪತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ರೀತಿಯಾಗಿ ತಮಗೆ ಹಿಂಸೆ ನೀಡಿದ್ದರು, ವರ್ಗಾವಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ವೇಳೆ ಎನ್ನುವ ವಿಚಾರ ತಿಳಿಸಿದ್ದಾರೆ.  ಅವರು ನಿವೃತ್ತಿಯಾದರೂ ಸಹ ಅವರ ನಿವೃತ್ತಿ ಅವಧಿಯನ್ನು ತಡೆಹಿಡಿಯಲಾಗಿತ್ತು ಎನ್ನುವುದ ಉಲ್ಲೇಖಿಸಿದ್ದಾರೆ ಎಂದು ರಾಯ್ ಹೇಳಿದ್ದಾರೆ. 

ಪ್ರಜಾಪ್ರಭುತ್ವ ಬದುಕಿದೆ ಎಂದು ದೀದಿ ಕಾಲೆಳೆದ ಪೋಸ್ಟರ್

ದತ್ ಅವರು 1986ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು, ಫೆ. 19 ರಂದು ತಮ್ಮ ಕೈ ಕತ್ತರಿಸಿಕೊಂಡು ಸ್ವಿಮ್ಮಿಂಗ್ ಫೂಲ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಇದೀಗ ಅವರ ಆತ್ಮಹತ್ಯಾ ಪತ್ರ ಲಭ್ಯವಾಗಿದ್ದು, ಮಮತಾ ಬ್ಯಾನರ್ಜಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.