ಡಿವೈಎಸ್ಪಿಯಾಗಿ ಪದನ್ನೋತಿ ಹೊಂದಿ ಇತ್ತೀಚಿಗಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತಿಯಾದ ಬಳಿಕ ಹಲವರಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಈ ಆಫೀಸರ್, ಅದನ್ನ ಬಿಟ್ಟು ಒಂದು ದರೋಡೆ ತಂಡವನ್ನೇ ಕಟ್ಟಿದ್ದಾರೆ.

ಒಂದು ಕಾಲದಲ್ಲಿ ಅವರನ್ನು ಎನ್​ಕೌಂಟರ್ ಸ್ಪೆಷಲಿಸ್ಟ್​ ಅನ್ನುತ್ತಿದ್ರು. ರೌಡಿಗಳ ಹೆಡೆಮುರಿಕಟ್ಟುತ್ತಿದ್ದ ಈ ಆಫೀಸರ್​ ಇದೀಗ ಕಳ್ಳರ ತಂಡ ಕಟ್ಟಿಕೊಂಡು ಬಂಧನವಾಗಿದ್ದಾರೆ. ಅವರು ಬೇರ್ಯಾರು ಅಲ್ಲ ಬಾಬು ನರೋನಾ!

ಬಾಬು ನರೋನಾ, ಸಬ್​ ಇನ್ಸ್​ಪೆಕ್ಟರ್​ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದವರು. ಡಿವೈಎಸ್ಪಿಯಾಗಿ ಪದನ್ನೋತಿ ಹೊಂದಿ ಇತ್ತೀಚಿಗಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತಿಯಾದ ಬಳಿಕ ಹಲವರಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಈ ಆಫೀಸರ್, ಅದನ್ನ ಬಿಟ್ಟು ಒಂದು ದರೋಡೆ ತಂಡವನ್ನೇ ಕಟ್ಟಿದ್ದಾರೆ. ನವೆಂಬರ್ 20 ರಂದು ಜೆಪಿ ನಗರದಲ್ಲಿ ಉದ್ಯಮಿಯೊಬ್ಬರಿಂದ ದರೋಡೆಯಾಗಿದ್ದ 83 ಲಕ್ಷ ದೋಚಿದ ಪ್ರಕರಣದಲ್ಲಿ ಬಾಬು ನರೋನಾ ಅಂಡ್​ ಟೀಮ್ ಬಂಧನವಾಗಿತ್ತು.

ಬಾಬು ನರೋನಾ ವಿರುದ್ಧ ಮತ್ತೊಂದು ಕೇಸ್​

ಜೆಪಿ ನಗರದಲ್ಲಿ ನರೋನಾ ಅಂಡ್​ ಟೀಮ್​ ಬಂಧನವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ , ಮತ್ತೊಬ್ಬ ಉದ್ಯಮಿಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೆಆರ್​ ಪುರ ನಿವಾಸಿ ಬಾಲಾಜಿ ಎಂಬ ಉದ್ಯಮಿಯನ್ನೂ ಇದೇ ಬಾಬು ನರೋನಾ ಗ್ಯಾಂಗ್ ಬ್ಲಾಕ್ ಮನಿ ವೈಟ್ ಮಾಡಿಕೊಡುವುದಾಗಿ ಹೇಳಿ, 30 ಲಕ್ಷ ರೂಪಾಯಿ ಹಣ ದೋಚಿದ್ದರು. ಸಿಸಿಬಿ ಪೊಲೀಸರ ಸೋಗಿನಲ್ಲಿ ಹೋಗಿದ್ದ ಬಾಬು ನರೋನಾ ಅಂಡ್ ಟೀಮ್​, ತಮ್ಮನ್ನು ಸಿಸಿಬಿ ಡಿವೈಎಸ್ಪಿ ಅಂತೇಳಿ ಪರಿಚಯ ಮಾಡಿಕೊಂಡಿದ್ದರು. ಬಳಿಕ, ಬಾಲಾಜಿಯನ್ನ ಕೆಆರ್​ಪುರಂ​ನ ದೇವಸಂದ್ರದಿಂದ ಕಿಡ್ನಾಪ್ ಮಾಡಿ ಆತನಿಂದ ಹಣ ಕಿತ್ತುಕೊಂಡು ಬಿಟ್ಟಿದ್ದಾರೆ. ಬಾಲಾಜಿ ದೂರು ಹಿನ್ನೆಲೆಯಲ್ಲಿ ಬಾಬು ನರೋನಾನನ್ನ ತಮ್ಮ ಕಸ್ಡಡಿಗೆ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಸಾರ್ವಜನಿಕರಿಗೆ ಕಣ್ಗಾವಲಾಗಿ ಇರಬೇಕಾದ ಖಾಕಿ ಅಧಿಕಾರಿಗಳೇ ಇತ್ತೀಚಿನ ದಿನಗಳಲ್ಲಿ ಬ್ಲಾಕ್​ ಅಂಡ್​ ಕೇಸ್​ನಲ್ಲಿ ಜೈಲು ಸೇರುತ್ತಿದ್ದಾರೆ. ರಕ್ಷಕರಾಗಿರಬೇಕಾದವರೇ ಭಕ್ಷಕರಾದರೇ ಇನೇನು ಗತಿ..! ಅನ್ನುವ ಪ್ರಶ್ನೆ ಎದುರಾಗಿದೆ.

ರವಿಕುಮಾರ್,ಕ್ರೈಂಬ್ಯೂರೋ,ಸುವರ್ಣನ್ಯೂಸ್,ಬೆಂಗಳೂರು