ತನಗೆ ತಾಳಿ ಕಟ್ಟದೇ ಇದ್ದರೆ ಕೇಸ್ ಹಾಕ್ತೀನಿ ಎಂದು ಸೈನಿಗೆ ಬೆದರಿಕೆ ಹಾಕುತ್ತಿದ್ದಾಳಂತೆ. ಮದುವೆ ಆಗು ಎನ್ನುವುದಷ್ಟೇ ಅಲ್ಲ, ತನಗೆ ತಿಂಗಳಿಗೆ 1.6 ಲಕ್ಷ ರೂಪಾಯಿ ಹಣವನ್ನೂ ಕೊಡಬೇಕೆಂದೂ ತಾಕೀತು ಮಾಡುತ್ತಿದ್ದಾಳೆನ್ನಲಾಗಿದೆ. ಈ ಟಾರ್ಚರ್ ಸ್ಟೂಡೆಂಟ್ ಹೆಸರು ಚಿತ್ರಲೇಖಾ.
ಬೆಂಗಳೂರು(ಅ. 03): ಹೊಸ ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕಲು ಐಎಎಸ್ ಅಧಿಕಾರ ಬಿಟ್ಟು ಕೋಚಿಂಗ್ ಕ್ಲಾಸ್ ಶುರು ಮಾಡಿದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಈಗ ಸಾಕಪ್ಪಾ ಸಾಕು ಎನ್ನುತ್ತಿದ್ದಾರೆ. 2016ರಲ್ಲಿ ಸ್ವಯಂ ನಿವೃತ್ತಿ ಪಡೆದ ರೊಮಾನಿ ಸೈನಿ ಎಂಬ ಐಎಎಸ್ ಅಧಿಕಾರಿ ಕಥೆ ಇದು. ಐಎಎಸ್ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಸೈನಿಗೆ ಈಗ ತಮ್ಮ ಶಿಷ್ಯೆಯಿಂದಲೇ ಕಾಟ ಶುರುವಾಗಿದೆ. ಮದುವೆಯಾಗು ಎಂದು ಆ ವಿದ್ಯಾರ್ಥಿನಿಯು ಪೀಡಿಸುತ್ತಿದ್ದಾಳೆ. ತನಗೆ ತಾಳಿ ಕಟ್ಟದೇ ಇದ್ದರೆ ಕೇಸ್ ಹಾಕ್ತೀನಿ ಎಂದು ಸೈನಿಗೆ ಬೆದರಿಕೆ ಹಾಕುತ್ತಿದ್ದಾಳಂತೆ. ಮದುವೆ ಆಗು ಎನ್ನುವುದಷ್ಟೇ ಅಲ್ಲ, ತನಗೆ ತಿಂಗಳಿಗೆ 1.6 ಲಕ್ಷ ರೂಪಾಯಿ ಹಣವನ್ನೂ ಕೊಡಬೇಕೆಂದೂ ತಾಕೀತು ಮಾಡುತ್ತಿದ್ದಾಳೆನ್ನಲಾಗಿದೆ. ಈ ಟಾರ್ಚರ್ ಸ್ಟೂಡೆಂಟ್ ಹೆಸರು ಚಿತ್ರಲೇಖಾ.
30 ವರ್ಷದ ನಿವೃತ್ತ ಐಎಎಸ್ ಅಧಿಕಾರಿ ರೊಮಾನಿ ಸೈನಿ ಅವರು ಚಿತ್ರಲೇಖಾ ವಿರುದ್ಧ ದೂರು ದಾಖಲಿಸಿದ್ದಾರೆ.
