Asianet Suvarna News Asianet Suvarna News

ಶ್ರೀನಗರದಲ್ಲಿ ಮತ್ತೆ ನಿರ್ಬಂಧ ಹೇರಿಕೆ: 2ಜಿ ಮೊಬೈಲ್ ಸೇವೆ ಬಂದ್!

ಶ್ರೀನಗರದ ಕೆಲವೆಡೆ ಭಾನುವಾರ ಹೊಸದಾಗಿ ಹಿಂಸಾಚಾರ| ಶ್ರೀನಗರದಲ್ಲಿ ಮತ್ತೆ ನಿರ್ಬಂಧ| -2 ಜಿ ಮೊಬೈಲ್‌ ಸೇವೆ ಬಂದ್‌| 

Restrictions imposed again in parts of Srinagar after overnight clashes say reports
Author
Bangalore, First Published Aug 19, 2019, 9:35 AM IST

ಶ್ರೀನಗರ[ಆ.19]: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಹೇರಿದ್ದ ನಿರ್ಬಂಧ ಸಡಿಲಿಸಿದ ಬೆನ್ನಲ್ಲೇ, ಶ್ರೀನಗರದ ಕೆಲವೆಡೆ ಭಾನುವಾರ ಹೊಸದಾಗಿ ಹಿಂಸಾಚಾರ ಕಾಣಿಸಿಕೊಂಡಿದೆ. ಪ್ರತಿಭಟನೆಯ ವೇಳೆ ಅನೇಕ ಮಂದಿ ಗಾಯಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧವನ್ನು ಮರು ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ 300 ಹಜ್‌ ಯಾತ್ರಿಕರಿದ್ದ ವಿಮಾನ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಬಂದಿಳಿದಿದ್ದು, ಯಾತ್ರಿಕರು ತಮ್ಮ ಮನೆಗಳಿಗೆ ತೆರಳಲು ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು.

ಮತ್ತೆ ಇಂಟರ್‌ನೆಟ್‌ ಬಂದ್‌:

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಇಂಟರ್‌ನೆಟ್‌ ಸೇವೆಯನ್ನು ಬಂದ್‌ ಮಾಡಲಾಗಿದೆ. ಎರಡು ದಿನದ ಹಿಂದಷ್ಟೇ ಜಮ್ಮು- ಕಾಶ್ಮೀರದ 5 ಜಿಲ್ಲೆಗಳಲ್ಲಿ 2 ಜಿ. ಸೇವೆಯನ್ನು ಒದಗಿಸಲಾಗಿತ್ತು. ಆದರೆ, ಸುದ್ದಿ ಹಬ್ಬಿಸಲು ಇಂಟರ್‌ನೆಟ್‌ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸುಳ್‌ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಮ್ಮು ಪೊಲೀಸ್‌ ಮಹಾ ನಿರ್ದೇಶಕ ಮುಕೇಶ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios