ನಿಮ್ಮ ನಾಯಿ ಮಿಸ್​ ಆಗಿದೆಯಾ? ಎಲ್ಲೆಲ್ಲೋ ಹುಡುಕುವ ಬದಲು, ಪಕ್ಕದ ಮಾಂಸದ ಹೋಟೇಲ್​'ನಲ್ಲೇ ಹುಡುಕಿ. ಯಾಕಂದ್ರೆ ನಿಮ್ಮ ನಾಯಿ ಮಾಂಸದ ಅಂಗಡಿಯಲ್ಲಿ ಕಬಾಬ್​ ಆಗಿರಬಹುದು. ಹೌದು, ಗೋವಾದ ಚೈನೀಸ್ ಫುಡ್ ಸೆಂಟರ್'ವೊಂದರಲ್ಲಿ ಖಾದ್ಯಗಳನ್ನ ತಯಾರಿಸೋಕೆ ನಾಯಿ ಮಾಂಸವನ್ನ ಬಳಸುತ್ತಾರೆ ಎಂಬ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ.

ಗೋವಾ(ಅ.13): ನಿಮ್ಮ ನಾಯಿ ಮಿಸ್​ ಆಗಿದೆಯಾ? ಎಲ್ಲೆಲ್ಲೋ ಹುಡುಕುವ ಬದಲು, ಪಕ್ಕದ ಮಾಂಸದ ಹೋಟೇಲ್​'ನಲ್ಲೇ ಹುಡುಕಿ. ಯಾಕಂದ್ರೆ ನಿಮ್ಮ ನಾಯಿ ಮಾಂಸದ ಅಂಗಡಿಯಲ್ಲಿ ಕಬಾಬ್​ ಆಗಿರಬಹುದು. ಹೌದು, ಗೋವಾದ ಚೈನೀಸ್ ಫುಡ್ ಸೆಂಟರ್'ವೊಂದರಲ್ಲಿ ಖಾದ್ಯಗಳನ್ನ ತಯಾರಿಸೋಕೆ ನಾಯಿ ಮಾಂಸವನ್ನ ಬಳಸುತ್ತಾರೆ ಎಂಬ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ.

ದಕ್ಷಿಣ ಗೋವಾದ ಸಾಲಿಗೌನ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕಾಲಂಗುಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಾದಲ್ಲಿ ಇತ್ತೀಚಿಗೆ ಚೈನೀಸ್ ಫುಡ್ ಶಾಪ್ ನಡೆಸುವ ಯುವಕರು ಕದ್ದು ಮುಚ್ಚಿ ಬ್ಯಾಗ್'ನಲ್ಲಿ ಮಾಂಸ ತೆಗೆದುಕೊಂಡು ಹೋಗ್ತಾ ಇದ್ರು. ಅವರ ಮೇಲೆ ಅನುಮಾನ ಬಂದಿದ್ದರಿಂದಾಗಿ ಸ್ಥಳೀಯರು ಅವರನ್ನ ಕರೆದು ಬ್ಯಾಗ್ ಚೆಕ್ ಮಾಡಿದ್ದಾರೆ. ಆಗ ಅದರಲ್ಲಿ ನಾಯಿ ಮಾಂಸ ಇರೋದನ್ನ ನೋಡಿ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

ಇಷ್ಟೇ ಅಲ್ಲದೆ ಯುವಕರು ನಡೆಸುವ ಫುಡ್ ಸೆಂಟರ್ ಬಳಿ ಇರುವ ಪ್ಯಾರೇರಾ ರೆಸ್ಟೋರೆಂಟ್ ಮಾಲೀಕ ಸಾಕಿದ್ದ ನಾಯಿಯ ಕಾಲು ಪತ್ತೆಯಾಗಿದೆ. ಕಾಲುಗಳನ್ನ ನೋಡಿದ ರೆಸ್ಟೋರೆಂಟ್ ಮಾಲೀಕ ನಾಯಿ ನನ್ನದು ಅಂತಾ ಗುರುತಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.ನಂತರ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಆ ಯುವಕರನ್ನ ಪೋಲೀಸರಿಗೆ ಒಪ್ಪಿಸಿದ್ದಾರೆ.