ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ರಜನಿ ವಿರೋಧ
ದೇವಸ್ಥಾನದ ಸಂಪ್ರದಾಯ ವಿಚಾರಗಳಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡಬಾರದು ಎದು ಸೂಪರ್‌ಸ್ಟಾರ್ ರಜನೀಕಾಂತ್ ಅವರು ಹೇಳಿದ್ದಾರೆ.
ಚೆನ್ನೈ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಜಾರಿ ವೇಳೆ ಶಬರಿಮಲೆಯಲ್ಲಿ ಉಂಟಾದ ಗಲಭೆ ರೀತಿಯ ವಾತಾವರಣದ ಬೆನ್ನಲ್ಲೇ, ದೇವಸ್ಥಾನದ ಸಂಪ್ರದಾಯ ವಿಚಾರಗಳಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡಬಾರದು ಎದು ಸೂಪರ್‌ಸ್ಟಾರ್ ರಜನೀಕಾಂತ್ ಅವರು ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಅವರು, ‘ದೀರ್ಘಕಾಲದಿಂದ ಯಾವುದೇ ದೇವಸ್ಥಾನ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡಬಾರದು,’ ಎಂದು ಪ್ರತಿಪಾದಿಸಿದರು.
ಎಲ್ಲ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನ ಹಕ್ಕು ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದೇವಸ್ಥಾನ ವಿಚಾರಕ್ಕೆ ಬಂದಾಗ, ಪ್ರತೀ ದೇವಾಲಯಗಳು ಕೆಲವೊಂದು ಆಚಾರ-ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿವೆ. ಈ ವಿಚಾರಗಳಲ್ಲಿ ಯಾರೊಬ್ಬರೂ ಸಹ ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟರು.