ಕೊನೆಗೂ ರಾಜಧಾನಿ ಬೆಂಗಳೂರಲ್ಲಿ ರೇರಾ ಕಾಯಿದೆ ಜಾರಿ ಆಗಿದೆ. ನಿನ್ನೆಯಿಂದಲೇ ರಾಜ್ಯಾದ್ಯಂತ ಅಧಿಸೂಚನೆ ಪ್ರಕಟವಾಗಿದ್ದು ಬಿಲ್ಡರ್​​ಗಳಿಗೆ ಹೆಚ್ಚಿನ ಷರತ್ತು ವಿಧಿಸಲಾಗಿದೆ. ಅದೇ ರೀತಿ ಫ್ಲ್ಯಾಟ್, ಮನೆಗಳ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ  ರೇರಾ ಕಾಯಿದೆಯಲ್ಲಿ ಏನಿದೆ? ಇಲ್ಲಿದೆ ವಿವರ.

ಬೆಂಗಳೂರು(ಜು.11): ಕೊನೆಗೂ ರಾಜಧಾನಿ ಬೆಂಗಳೂರಲ್ಲಿ ರೇರಾ ಕಾಯಿದೆ ಜಾರಿ ಆಗಿದೆ. ನಿನ್ನೆಯಿಂದಲೇ ರಾಜ್ಯಾದ್ಯಂತ ಅಧಿಸೂಚನೆ ಪ್ರಕಟವಾಗಿದ್ದು ಬಿಲ್ಡರ್​​ಗಳಿಗೆ ಹೆಚ್ಚಿನ ಷರತ್ತು ವಿಧಿಸಲಾಗಿದೆ. ಅದೇ ರೀತಿ ಫ್ಲ್ಯಾಟ್, ಮನೆಗಳ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ ರೇರಾ ಕಾಯಿದೆಯಲ್ಲಿ ಏನಿದೆ? ಇಲ್ಲಿದೆ ವಿವರ.

ರಿಯಲ್‌ ಎಸ್ಟೇಟ್‌ ಹೆಸರಲ್ಲಿ ನಡೆಯುತ್ತಿರುವ ವಂಚನೆ, ಲೂಟಿಗೆ ಕಡಿವಾಣ ಹಾಕಲು ರೇರಾ ಅಂದ್ರೆ ರಿಯಲ್ ಎಸ್ಟೇಟ್​​​​ ರೆಗ್ಯುಲೇಟರ ಅಥಾರಿಟಿ ಜಾರಿಯಾಗಿದೆ. ನಿನ್ನೆಯೇ ರಾಜ್ಯಾದ್ಯಂತ ಅಧಿಸೂಚನೆ ಹೊರಬಿದ್ದಿದ್ದು, ರೇರಾ ನಿಯಮ ಬೆಂಗಳೂರಲ್ಲೂ ಜಾರಿಯಲ್ಲಿದೆ. ರಾಜ್ಯ ಸರ್ಕಾರ ತನ್ನ ವಿವೇಚನಾ ಅಧಿಕಾರ ಬಳಸಿ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ರೇರಾ ನಿಯಮ ರೂಪಿಸಿದೆ. 

‘ರೇರಾ' ರೂಲ್ಸ್

- ಆರಂಭದ ಹಂತದ ಎಲ್ಲಾ ಯೋಜನೆಗಳಿಗೂ ಕಾಯ್ದೆ ಅನ್ವಯ

- ಪಾರದರ್ಶಕ ವ್ಯವಹಾರಕ್ಕೆ ದಾಖಲೆ, ಹಣಕಾಸು ವ್ಯವಹಾರದ ಮಾಹಿತಿ

- ಕಾಲಮಿತಿಯಲ್ಲಿ ಫ್ಲ್ಯಾಟ್​ಗಳನ್ನು ಗ್ರಾಹಕರಿಗೆ ನಿರ್ಮಿಸಿಕೊಡಬೇಕು

- ನಿಯಮ ಮೀರಿದವರಿಗೆ ಬಿಲ್ಡರ್​​ಗಳಿಗೆ ಜೈಲು ಶಿಕ್ಷೆ, ದಂಡ ಕಡ್ಡಾಯ

- ಆಯಾ ಭಾಗದ ಮಾರ್ಗಸೂಚಿ ದರದ ಮೇಲೆ ಫ್ಲ್ಯಾಟ್ ಮೌಲ್ಯ ನಿರ್ಧಾರ

- ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಮಂಡಳಿ ಮಾದರಿ ಸಂಸ್ಥೆ ರಚನೆಗೆ ಅವಕಾಶ

‘ರೇರಾ' ನಿಯಮ ಯಾರಿಗೆ ಅನ್ವಯವಾಗುವುದಿಲ್ಲ?

ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು

ಗ್ರಾಃಕರಿಗೆ ಶೇ.60ರಷ್ಟು ಕ್ರಯಪತ್ರ ಮಾಡಿಕೊಟ್ಟಿರುವ ಸಂಸ್ಥೆಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ

ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನೆಗಳಿಗೂ ಅನ್ವಯಿಸುವುದಿಲ್ಲ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಮ 2017 ಎಂದು ಹೆಸರಿಡಲಾಗಿದ್ದು, ಬಿಲ್ಡರ್ ಗಳಿಗೆ ಹೆಚ್ಚಿನ ಷರತ್ತು ವಿಧಿಸಿದೆ. ಇನ್ಮುಂದೆ ಬಿಲ್ಡರ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಗಳು ಪಾರದರ್ಶಕ ವ್ಯವಹಾರ ನಡೆಸಬೇಕು. ಒಟ್ಟಿನಲ್ಲಿ ರಿಯಲ್ ಎಸ್ಟೇಟ್​​ ಏಜೆಂಟ್'​ಗಳಿಗೆ ಕಡಿವಾಣ ಬಿದ್ದಿದ್ದು ಗ್ರಾಹಕನನ್ನೇ ದೊರೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.