‘‘ಹಿಲರಿ ಪಾಕ್ ಬಗ್ಗೆ ಅನುಕಂಪ ಹೊಂದಿದ್ದಾರೆ. ಅವರು ಭಾರತದ ವಿರುದ್ಧ ಬಳಸಲು ಶಸಾಸಗಳು ಮತ್ತು ಆರ್ಥಿಕ ಅನುದಾನವನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ವೀಸಾ ನಿರಾಕರಿಸುವಲ್ಲೂ ಅವರ ಕೈವಾಡವಿತ್ತು.

ವಾಷಿಂಗ್ಟನ್(ನ.3):ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಐದು ದಿನವಷ್ಟೇ ಉಳಿದಿರುವಾಗ, ಡೆಮಾಕ್ರಾಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ರಿಪಬ್ಲಿಕನ್ ಪಕ್ಷದ ಹಿಂದೂ ಸಂಘಟನೆಗಳು ಪ್ರಚಾರ ಶುರುಮಾಡಿವೆ. ಹಿಲರಿ ಪಾಕಿಸ್ತಾನದ ಪರವಾಗಿದ್ದಾರೆ ಎಂದು ಅವುಗಳು ಆಪಾದಿಸಿವೆ. ಭಾರತೀಯ ಅಮೆರಿಕನ್ ಟಿವಿ ವಾಹಿನಿಗಳಲ್ಲಿ ಈ ಕುರಿತು ಜಾಹೀರಾತುಗಳನ್ನೂ ಪ್ರಕಟಿಸಲಾಗಿದೆ,

‘‘ಹಿಲರಿ ಪಾಕ್ ಬಗ್ಗೆ ಅನುಕಂಪ ಹೊಂದಿದ್ದಾರೆ. ಅವರು ಭಾರತದ ವಿರುದ್ಧ ಬಳಸಲು ಶಸಾಸಗಳು ಮತ್ತು ಆರ್ಥಿಕ ಅನುದಾನವನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ವೀಸಾ ನಿರಾಕರಿಸುವಲ್ಲೂ ಅವರ ಕೈವಾಡವಿತ್ತು. ಅವರು ಇಸ್ಲಾಂ ಮೂಲಭೂತವಾದವನ್ನು ಬೆಂಬಲಿಸುವ ವ್ಯಕ್ತಿಗಳು ಮತ್ತು ದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸುತ್ತಾರೆ’’ ಎಂದು ರಿಪಬ್ಲಿಕನ್ ಹಿಂದೂ ಮೈತ್ರಿ (ಆರ್‌ಎಚ್‌ಸಿ) ಜಾಹೀರಾತಿನಲ್ಲಿ ತಿಳಿಸಿದೆ.

‘‘ಅವರ ಹಾಲಿ ಆಪ್ತೆ ಹುಮಾ ಆಬಿದೀನ್ ಪಾಕಿಸ್ತಾನಿ ಮೂಲದವರು. ಹಿಲರಿ ಪತಿ ಬಿಲ್ ಕ್ಲಿಂಟನ್ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಬಯಸಿದ್ದಾರೆ. ಹಾಗಾಗಿ, ಭಾರತೀಯ ಅಮೆರಿಕನ್ನರೆಲ್ಲರೂ ಟ್ರಂಪ್‌ಗೆ ಮತ ಚಲಾಯಿಸಿ’’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಆದರೆ ಈ ಜಾಹೀರಾತು ತಪ್ಪು ಹಾದಿಗೆಳೆಯುವಂಥದ್ದು ಮತ್ತು ಸುಳ್ಳು ಎಂದು ಹಿಲರಿ ಪರ ಪ್ರಚಾರದ ದೇಣಿಗೆ ಸಂಗ್ರಹಕಾರ ಅಜಯ್ ಜೈಬ್ ಭುಟೊರಿಯ ಹೇಳಿದ್ದಾರೆ.

ಇನ್ನೊಂದೆಡೆ, ಹಿಲರಿ ಹಾಗೂ ಟ್ರಂಪ್ ನಡುವೆ ಪರಸ್ಪರ ವಾಗ್ದಾಳಿ ಮುಂದುವರಿದಿದೆ. ಇಬ್ಬರೂ ಪರಸ್ಪರ ಗುಣ ನಡತೆಗಳ ಬಗ್ಗೆ ವಾಕ್ಸಮರ ನಡೆಸಿದ್ದಾರೆ. ಇದೇ ವೇಳೆ, ಬಹುತೇಕ ರಾಷ್ಟ್ರೀಯ ಸಮೀಕ್ಷೆಗಳು ಟ್ರಂಪ್‌ರಿಗಿಂತ ಹಿಲರಿಯವರು ಮುನ್ನಡೆ ಸಾಸಿದ್ದಾರೆ ಎಂದು ಹೇಳಿವೆ.