ಲೈವ್ ರಿಪೋರ್ಟಿಂಗ್ ಮಾಡುವ ಸಂದರ್ಭದಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ಕೆಲವೊಮ್ಮೆ ಪರಿಸ್ಥತಿ ಕೈ ಮೀರಿ ತಲೆತಗ್ಗಿಸಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಟಿವಿಯಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನೊಬ್ಬನಿಗೆ ಅರಿವಿಲ್ಲದೆ ಮಾಡಿದ ಅಚಾತುರ್ಯದಿಂದಾಗಿ ಲೈವ್'ನಲ್ಲೇ ಕಪಾಳಮೋಕ್ಷವಾಗಿದೆ. ಅಷ್ಟಕ್ಕೂ ಆ ವರದಿಗಾರ ಮಾಡಿದ್ದೇನು ಅಂತೀರಾ? ಈ ಸ್ಟೋರಿ ನೋಡಿ

ಬ್ರಿಟನ್(ಮೇ.18): ಲೈವ್ ರಿಪೋರ್ಟಿಂಗ್ ಮಾಡುವ ಸಂದರ್ಭದಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ಕೆಲವೊಮ್ಮೆ ಪರಿಸ್ಥತಿ ಕೈ ಮೀರಿ ತಲೆತಗ್ಗಿಸಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಟಿವಿಯಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನೊಬ್ಬನಿಗೆ ಅರಿವಿಲ್ಲದೆ ಮಾಡಿದ ಅಚಾತುರ್ಯದಿಂದಾಗಿ ಲೈವ್'ನಲ್ಲೇ ಕಪಾಳಮೋಕ್ಷವಾಗಿದೆ. ಅಷ್ಟಕ್ಕೂ ಆ ವರದಿಗಾರ ಮಾಡಿದ್ದೇನು ಅಂತೀರಾ? ಈ ಸ್ಟೋರಿ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಿಟಿಷ್ ಬ್ರಾಡ್'ಕಾಸ್ಟಿಂಗ್ ಕಾರ್ಪೋರೇಷನ್(ಬಿಬಿಸಿ) ವರದಿಗಾರ ಬೆನ್ ಬ್ರೌನ್ ಮಂಗಳವಾರದಂದು ಬ್ರೆಡ್ ಫೋರ್ಡ್'ನಲ್ಲಿ ತನ್ನ ಸಹದ್ಯೋಗಿ ನಾರ್ಮನ್ ಸ್ಮಿಥ್'ರವರ ಲೈವ್ ಇಂಟರ್ವ್ಯೂ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಲ್ಲಿಗಾಗಮಿಸಿದ ಮಹಿಳೆಯೊಬ್ಬಳು ನಗುತ್ತಲೇ ಕ್ಯಾಮರಾ ಫ್ರೇಮ್'ಗೆ ಬಂದು ವರದಿಗಾರನಿಗೆ ಥಮ್ಸ್ ಅಪ್ ಮಾಡಿ 'ಎಕ್ಸಲೆಂಟ್, ಫೆಂಟಾಸ್ಟಿಕ್ ಉತ್ತಮವಾಗಿ ವರದಿ ಮಾಡುತ್ತಿದ್ದೀಯ ಎಂದಿದ್ದಳು. ಆದರೆ ಇದಾದ ಬಳಿಕ ವರದಿಗಾರ ತೋರಿದ ವರ್ತನೆ ಆತ ತಲೆಬಾಗಿಸುವಂತೆ ಮಾಡಿದ್ದು.

ಮಹಿಳೆ ಲೈವ್'ನಲ್ಲಿ ಈ ರೀತಿ ಮಾಡಿದ್ದರಿಂದ ಕುಪಿತಗೊಂಡ ವರದಿಗಾರ ಆಕೆಯನ್ನು ದೂಡಿ ಅಲ್ಲಿಂದ ದೂರ ತಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಆತ ತನಗರಿವಿಲ್ಲದೆಯೇ ಆಕೆಯ ಎದೆ ಭಾಗಕ್ಕೆ ಕೈ ಹಾಕಿ ದೂರ ತಳ್ಳಿದ್ದಾನೆ. ವರದಿಗಾರ ತಿಳಿಯದೆ ಹೀಗೆ ಮಾಡಿದ್ದರೂ ದೂರ ಹೋದ ಮಹಿಳೆ ಮಾತ್ರ ವರದಿಗಾರನ ಕೈಗೆ ಸರಿಯಾಗೇ ಗುದ್ದಿ ಮುಂದೆ ಸಾಗಿದ್ದಾಳೆ. ಇದರಿಂದಾಗಿ ವರದಿಗಾರ ತಾನು ತಿಳಿಯದೇ ಮಾಡಿದ ತಪ್ಪಿಗೆ ಲೈವ್'ನಲ್ಲೇ ಒದೆ ತಿಂದಂತಾಗಿದೆ.