ಮೋನ್ವಾ ಗಾಲ್ಫ್ ಕೋರ್ಸ್ ಬಳಿ ರಸ್ತೆ ಬದಿಯಲ್ಲಿ ಇಲೆವನ್ ಮೀಡಿಯಾದ ವರದಿಗಾರನೊಬ್ಬನ ಮೃತದೇಹ ಪತ್ತೆಯಾಗಿದೆ.
ಮ್ಯಾನ್ಮಾರ್ (ಡಿ.13): ಮೋನ್ವಾ ಗಾಲ್ಫ್ ಕೋರ್ಸ್ ಬಳಿ ರಸ್ತೆ ಬದಿಯಲ್ಲಿ ಇಲೆವನ್ ಮೀಡಿಯಾದ ವರದಿಗಾರನೊಬ್ಬನ ಮೃತದೇಹ ಪತ್ತೆಯಾಗಿದೆ.
ಮೋನ್ವಾ ಮೂಲದ ವರದಿಗಾರ ಕೋ ಸೋ ಮೋ ಟುನ್ ದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ತರಚು ಗಾಯಗಳಾಗಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದು ಕೊಲೆಯಾಗಿರಬಹುದು ಎಂದು ಪೋಲಿಸರು ಸಂಶಯ
ವ್ಯಕ್ತಪಡಿಸಿದ್ದಾರೆ ಎಂದು ಪೋಲಿಸ್ ಲೆಫ್ಟಿನೆಂಟ್ ಥೀನ್ ಸ್ವೇ ಮೈಂಟ್ ಹೇಳಿದ್ದಾರೆ.
ಮೃತಪಟ್ಟಿರುವ ವ್ಯಕ್ತಿ ಇಲೆವನ್ ಮೀಡಿಯಾದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ಸಾವಿನ ಕಾರಣವನ್ನು ನಾವು ತನಿಖೆ ನಡೆಸುತ್ತಿದ್ದೇವೆ. ಘಟನೆ ನಡೆದ ಸ್ಥಳದಲ್ಲಿ ಪೋಲಿಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಮೋನ್ವಾ ಕೇಂದ್ರೀಯ ಪೋಲಿಸ್
ಪಡೆ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಹೇಳಿದ್ದಾರೆ.
