ಧರ್ಮದ ಹೆಸರಿನಲ್ಲಿ ಹಿಂಸೆ ನೀಡಿದರೆ ಹುಷಾರ್!

First Published 20, Jun 2018, 4:15 PM IST
Religious rites that affect dignity are inhuman, says Madras HC
Highlights

ಮದ್ರಾಸ್ ಹೖಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಧರ್ಮ ಅಥವಾ ಧರ್ಮದ ಆಚರಣೆ ಹೆಸರಿನಲ್ಲಿ ಯಾವುದೆ ವ್ಯಕ್ತಿಗೆ ಕಿರುಕುಳ ಅಥವಾ ದೖಹಿಕ ಹಿಂಸೆ ನೀಡಿದರೆ  ಅಂಥವರು ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದಿದೆ. ಹಾಗಾದರೆ ಯಾವ ಆಧಾರದಲ್ಲಿ ಇಂಥ ತೀರ್ಪು ನೀಡಿದೆ...

ಚೆನ್ನೈ [ಜೂನ್ 20]  ಮದ್ರಾಸ್ ಹೖಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಧರ್ಮ ಅಥವಾ ಧರ್ಮದ ಆಚರಣೆ ಹೆಸರಿನಲ್ಲಿ ಯಾವುದೆ ವ್ಯಕ್ತಿಗೆ ಕಿರುಕುಳ ಅಥವಾ ದೈಹಿಕ ಹಿಂಸೆ ನೀಡಿದರೆ  ಅಂಥವರು ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದಿದೆ. 

ಯಾವುದೇ ಧರ್ಮದಲ್ಲಿ ವ್ಯಕ್ತಿಯೋರ್ವನಿಗೆ ನೋವಾಗುವ ಅಥವಾ ಅವನ ಗೌರವಕ್ಕೆ ಧಕ್ಕೆ ಉಂಟಾಗುವ ಆಚಾರಗಳನ್ನು ಅಮಾನವೀಯ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಆನಂದ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

2001ರಲ್ಲಿ ನಾಲ್ವರು ಮಹಿಳೆಯರು ಸೊಸೆಯ ಮೇಲೆ ನಡೆಸಿದ ಭೂತೋಚ್ಛಾಟನೆ ಕಾರ್ಯದ ಕುರಿತ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.  ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ದೇಹದಲ್ಲಿ ದೆವ್ವ ಹೊಕ್ಕಿದೆ ಎಂದು ಆರೋಪಿಸಿದ್ದ ನಾಲ್ವರು ಮಹಿಳೆಯರು ಆಕೆಯನ್ನು ಕೆರೆಯೊಂದರ ಬಳಿ ಕರೆದುಕೊಂಡು ಹೋಗಿ ತಲೆ ಬೋಳಿಸಿದ್ಇದರು. ಇದಾದ ಮೇಲೆ ಆಕೆಯ ನಾಲಗೆಗೂ ಹಾನಿ ಮಾಡಿ ಆಕೆಯ ಗಂಡನಿಂದಲೇ ಇನ್ನೊಮ್ಮೆ ತಾಳಿ ಕಟ್ಟಿಸಲಾಗಿತ್ತು.

 

loader