ಬ್ರಾಡ್‌ಬ್ಯಾಂಡ್‌ ಕ್ಷೇತ್ರ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಕಂಪನಿ, ಕೇಬಲ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುತ್ತಿರುವ ಹಾಥ್‌ವೇದ ಶೇ.51ರಷ್ಟುಹಾಗೂ ಡೆನ್‌ ನೆಟ್‌ವರ್ಕ್ ಕಂಪನಿಗಳ ಶೇ.66ರಷ್ಟುಪಾಲು ಷೇರು ಖರೀದಿಸುವುದಾಗಿ ಪ್ರಕಟಿಸಿದೆ. 

ನವದೆಹಲಿ: ಬ್ರಾಡ್‌ಬ್ಯಾಂಡ್‌ ಕ್ಷೇತ್ರ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಕಂಪನಿ, ಕೇಬಲ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುತ್ತಿರುವ ಹಾಥ್‌ವೇದ ಶೇ.51ರಷ್ಟುಹಾಗೂ ಡೆನ್‌ ನೆಟ್‌ವರ್ಕ್ ಕಂಪನಿಗಳ ಶೇ.66ರಷ್ಟುಪಾಲು ಷೇರು ಖರೀದಿಸುವುದಾಗಿ ಪ್ರಕಟಿಸಿದೆ. 

ಇದು ಒಟ್ಟಾರೆ .5230 ಕೋಟಿ ರು.ಮೊತ್ತದ ವ್ಯವಹಾರವಾಗಿರಲಿದೆ ಎಂದು ಕಂಪನಿ ಹೇಳಿದೆ. ರಿಲಯನ್ಸ್‌ನ ಈ ಕ್ರಮದಿಂದ ಕೇಬಲ್‌ ನೆಟ್‌ವರ್ಕ್ ಉದ್ಯಮದಲ್ಲಿ ಭಾರಿ ಬದಲಾವಣೆ ಉಂಟಾಗುವ ಸಾಧ್ಯತೆ ಇದ್ದು, ವಿವಿಧ ಜಾಲಗಳ ನಡುವೆ ದರಸಮರ ಏರ್ಪಡುವ ಸಾಧ್ಯತೆ ಇದೆ. ಡೆನ್‌ನಲ್ಲಿ 2,045 ಕೋಟಿ ರು.ಗಳನ್ನು ಪ್ರಾಥಮಿಕ ಹಂತದಲ್ಲಿ ಹೂಡಲಾಗಿದೆ. 

ಬಾಕಿ 245 ಕೋಟಿ ರು.ಗಳನ್ನು ದ್ವಿತೀಯ ಹಂತದಲ್ಲಿ ಹೂಡಲಾಗುತ್ತದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ‘ಹ್ಯಾತ್‌ವೇ’ ಜಾಲದಲ್ಲಿ 2940 ಕೋಟಿ ರು.ಗಳನ್ನು ಹೂಡಿ ಶೇ.51.3ರಷ್ಟುಪಾಲನ್ನು ಖರೀದಿಸಲಾಗಿದೆ ಎಂದು ರಿಲಯನ್ಸ್‌ ತಿಳಿಸಿದೆ.